ಚುಟುಕು- ಚುರುಕು

7

ಚುಟುಕು- ಚುರುಕು

Published:
Updated:

ಸಣ್ಣಪುಟ್ಟ ಸಮಸ್ಯೆಗೂ ಆ್ಯಂಟಿಬಯೊಟಿಕ್ ಔಷಧಿಗಳ ಬಳಕೆ ಸರಿಯಲ್ಲ, ಇವು ಮುಂದೆ ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಯಾವಾಗ ಅವುಗಳನ್ನು ಬಳಸಬೇಕು, ಯಾವಾಗ ಅಲ್ಲ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.

                                  * * *ಎದೆಯುರಿ ಅಥವಾ ಹುಳಿತೇಗು ಇದ್ದಾಗ ಮಸಾಲೆಯುಕ್ತ ಆಹಾರದಿಂದ ದೂರವಿರಿ. ಮಲಗುವ ಸಮಯದಲ್ಲಿ ಬೆಳ್ಳುಳ್ಳಿ, ಮೆಣಸಿನಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಬಳಸಿ ಮಾಡಿದ ಆಹಾರವನ್ನು ಹೆಚ್ಚಾಗಿ ತಿನ್ನಬೇಡಿ. ಇದು ಎದೆಯುರಿ ಅಥವಾ ಅಜೀರ್ಣಕ್ಕೆ ಕಾರಣವಾಗಿ ಸುಖನಿದ್ರೆಗೆ ಅಡ್ಡಿ ಉಂಟು ಮಾಡಬಹುದು.

                                   * * *ನಿಮ್ಮ ಮೂಳೆ ಗಟ್ಟಿಯಾಗಿರಬೇಕೇ? ಹಾಗಿದ್ದರೆ ಕಡಿವೆು ಕೊಬ್ಬು ಇರುವ ಆಹಾರ ಸೇವಿಸಿ. ಅಷ್ಟೇ ಅಲ್ಲ ಕೆಲ ಕಾಲ ಬಿಸಿಲಿನಲ್ಲಿ ಕಳೆಯುವುದನ್ನು ಮರೆಯದಿರಿ.

                                        * * *ದಿನಕ್ಕೆ 10 ಗಂಟೆಗಿಂತ ಕಡಿವೆು ನಿದ್ರೆ ಮಾಡುವ ಮಕ್ಕಳು ಸಿಡುಕಾಡುವುದು ಸಾಮಾನ್ಯ. ಅಲ್ಲದೆ ಅವರು ಅತಿಯಾದ ಚಟುವಟಿಕೆ, ವಾದಪ್ರಿಯರು, ಅವಿಧೇಯರು, ಆಕ್ರಮಣಶೀಲರೂ ಆಗಿರುತ್ತಾರೆ.

                                        * * *ಒಂದೇ ಬಾರಿ ರಕ್ತದೊತ್ತಡ ಪರೀಕ್ಷಿಸಿ, ಹೆಚ್ಚಾಗಿರುವುದು ಕಂಡ ಕೂಡಲೇ ಚಿಕಿತ್ಸೆ ಪಡೆಯುವುದು ಸರಿಯಲ್ಲ. ದಿನಕ್ಕೆ ಎರಡು ಬಾರಿಯಂತೆ ಸತತವಾಗಿ ಐದು ದಿನ ರಕ್ತದೊತ್ತಡವನ್ನು ಪರೀಕ್ಷೆಗೆ ಒಳಪಡಿಸಿ, ನಂತರವಷ್ಟೇ ಚಿಕಿತ್ಸೆಗೆ ಮುಂದಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry