ಮಂಗಳವಾರ, ಜನವರಿ 28, 2020
29 °C

ಚುಡಾಯಿಸಿದ ವ್ಯಕ್ತಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ವಿವಾಹಿತ ಮಹಿಳೆಯನ್ನು ಚುಡಾಯಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಅಮಾನುಷವಾಗಿ ಬಡಿಗೆ, ಕಟ್ಟಿಗೆ, ಕಲ್ಲುಗಳಿಂದ ಹೊಡೆದು ಕೊಂದ ಘಟನೆ ತಾಲ್ಲೂಕಿನ ಕರಗಾಂವ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮೃತನನ್ನು ಕರಗಾಂವ ಗ್ರಾಮದ ನಿವಾಸಿ, ದಲಿತ ಸಮುದಾಯದ ರಾಜು ಕಲ್ಲಪ್ಪಾ ಸಣ್ಣಕ್ಕಿ (30) ಎಂದು ಗುರುತಿಸಲಾಗಿದೆ. ಗ್ರಾಮದ ನಿವಾಸಿಗಳಾದ ಭೀಮಪ್ಪ ನಿಂಗಪ್ಪ ಶಿರಹಟ್ಟಿ ಉರುಫ್ ಮಾನಗಾಂವಿ ಹಾಗೂ ಇತರ ಐದು ಮಂದಿ ಸೇರಿಕೊಂಡು ಬಡಿಗೆ, ಕಟ್ಟಿಗೆ, ಕಲ್ಲುಗಳಿಂದ ಹೊಡೆದು ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ರಾಜು ಸಣ್ಣಕ್ಕಿ ಅವರ ತಂದೆ ಕಲ್ಲಪ್ಪ ವಿರೂಪಾಕ್ಷಿ ಸಣ್ಣಕ್ಕಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.`ನನ್ನ ಹೆಂಡತಿಯನ್ನು ಏಕೆ ಚುಡಾಯಿಸಿದೆ, ವಿಚಾರಣೆ ಮಾಡೋಣ~ ಎಂದು ಮಂಗಳವಾರ ಸಂಜೆ ತಮ್ಮ ಮಗನನ್ನು (ರಾಜು ಸಣ್ಣಕ್ಕಿ) ಮನೆಗೆ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ಥಳಿಸಿ, ಕೊಲೆ ಮಾಡಲಾಗಿದೆ ಎಂದು ಕಲ್ಲಪ್ಪ ಸಣ್ಣಕ್ಕಿ ದೂರಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)