ಬುಧವಾರ, ನವೆಂಬರ್ 13, 2019
21 °C

ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳು

Published:
Updated:

ಯಲಹಂಕ: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 16 ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಶನಿವಾರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಯೂ ಉಮೇದುವಾರಿಕೆಯನ್ನು ವಾಪಸ್ ಪಡೆದಿಲ್ಲ.ಯಲಹಂಕ ಕ್ಷೇತ್ರ: ಎಸ್.ಆರ್.ವಿಶ್ವನಾಥ್ (ಬಿಜೆಪಿ), ಎಂ.ಎನ್.ಗೋಪಾಲಕೃಷ್ಣ (ಕಾಂಗ್ರೆಸ್), ಬಿ.ಚಂದ್ರಪ್ಪ (ಜನತಾದಳ ಜಾತ್ಯತೀತ),  ವೇಣುಗೋಪಾಲರಾವ್ (ಕೆಜೆಪಿ), ಈರಣ್ಣ ಜಿ (ಬಿಎಸ್‌ಪಿ), ಮಹೇಶ್ ಪಿ. (ಬಿಎಸ್‌ಆರ್ ಕಾಂಗ್ರೆಸ್), ನಾರಾಯಣಸ್ವಾಮಿ ಬಿ.ಎಂ.(ಜೆಡಿಯು),  ಎಸ್.ಎಸ್.ಸರಿತ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಜಿ.ಆರ್. ಪದ್ಮಶ್ರೀ (ರಾಣಿ ಚನ್ನಮ್ಮ ಪಾರ್ಟಿ), ಓಬಣ್ಣ, ಗೋಪಾಲಕೃಷ್ಣ ಎಚ್.ಕೆ., ಚಂದ್ರಪ್ಪ, ಬಿ.ಚಂದ್ರಪ್ಪ, ಅನಿಲ್‌ರಾಜ್, ಕೆ.ಎನ್.ಮುನಿರಾಜು ಹಾಗೂ ಬಿ.ವಿಶ್ವನಾಥ್ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.ಬ್ಯಾಟರಾಯನಪುರ ಕ್ಷೇತ್ರ: ಕೃಷ್ಣಬೈರೇಗೌಡ (ಕಾಂಗ್ರೆಸ್), ಎ.ರವಿ (ಬಿಜೆಪಿ), ಹನುಮಂತೇಗೌಡ (ಜನತಾದಳ ಜಾತ್ಯತೀತ), ಕೆ.ಮಂಜುನಾಥ್ (ಕೆಜೆಪಿ), ಎಸ್.ವಿನಾಯಕ ಸುಬ್ರಮಣಿ (ಬಿಎಸ್‌ಆರ್ ಕಾಂಗ್ರೆಸ್), ಎಜಾಜ್ ಪಾಷ (ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್), ಶಾಂತಕುಮಾರಿ (ಮಹಿಳಾ ಪ್ರಧಾನ ಪಕ್ಷ), ಯೋಗಯ್ಯ ವಿ.ಸಿ (ಲೋಕಸತ್ತಾ ಪಕ್ಷ), ಕೆ.ಶ್ರೀಧರ (ಅಂಬೇಡ್ಕರ್ ಜನತಾ ಪಕ್ಷ) ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಅನ್ಸರ್ ಪಾಷಾ, ಅಬ್ದುಲ್ ಖಾದಿರ್, ಡಿ.ದೇವರಾಜ್, ನಾಗರಾಜ ಎಂ. ಹಾಗೂ ಬೈರೇಗೌಡ ಕಣದಲ್ಲಿದ್ದಾರೆ.ಹೊಸಕೋಟೆ ನಾಲ್ವರು ನಾಮಪತ್ರ ವಾಪಸ್

ಹೊಸಕೋಟೆ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ವರು ನಾಮಪತ್ರ ವಾಪಸ್ ಪಡೆದ್ದ್ದಿದು, 11 ಮಂದಿ ಕಣದಲ್ಲಿ ಉಳಿದಿದ್ದಾರೆ.

ಉಪೇಂದ್ರ ಮಾದಿಗ (ಬಿಎಸ್‌ಪಿ), ಎಂ.ಟಿ.ಬಿ ನಾಗರಾಜ್ (ಕಾಂಗ್ರೆಸ್), ಬಿ.ಎನ್.ಬಚ್ಚೇಗೌಡ (ಬಿಜೆಪಿ), ವಿ.ಶ್ರೀಧರ್ (ಜೆಡಿಎಸ್), ಬಿ.ಎನ್.ಆನಂದ್, ಆನಂದ್ ಎಂ.ಜಿ., ಎನ್.ನಾಗರಾಜ್ (ಎನ್‌ಟಿಬಿ), ಎಂ.ಪ್ರೇಮ್‌ಸಾಗರ್, ಎ.ಎನ್.ಬಚ್ಚೇಗೌಡ, ಟಿ.ವಿ.ಮಂಜುನಾಥಗೌಡ ಹಾಗು ಎಚ್.ಆರ್.ಶಂಕರ್ (ಎಲ್ಲರೂ ಪಕ್ಷೇತರರು) ಕಣದಲ್ಲಿ ಉಳಿದಿದ್ದಾರೆ.ಬೊಮ್ಮನಹಳ್ಳಿ: 10 ಮಂದಿ ಕಣಕ್ಕೆ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 10 ಮಂದಿ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಜನ್ನಪ್ಪ ತಿಳಿಸಿದ್ದಾರೆ.

ಬಿಜೆಪಿಯ ಎಂ.ಸತೀಶ್‌ರೆಡ್ಡಿ, ಕಾಂಗ್ರೆಸ್‌ನ ಸಿ.ನಾಗಭೂಷಣ್‌ರೆಡ್ಡಿ, ಜೆಡಿಎಸ್‌ನ ಶರಶ್ಚಂದ್ರಬಾಬು, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಎಸ್.ಟಿ.ಶ್ರೀನಿವಾಸ್, ಲೋಕಸತ್ತಾ ಪಾರ್ಟಿಯ ಡಾ.ಅಶ್ವಿನ್ ಮಹೇಶ್, ಬಿಎಸ್‌ಪಿಯ ಅಪ್ಸರ್ ಪಾಷ, ಕೆಜೆಪಿಯ ಬಿ.ರಮೇಶ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಯೋಗೀಶ್ ದೇವರಾಜ್, ಜಗದೀಶ್‌ರೆಡ್ಡಿ, ಆರ್.ನಾಗಭೂಷಣ್ ಕಣದಲ್ಲಿ ಉಳಿದಿದ್ದಾರೆ.ಕ್ಷೇತ್ರದಾದ್ಯಂತ ಚುನಾವಣಾ ಕಾವು ನಿಧಾನವಾಗಿ ಏರುತ್ತಿದ್ದು, ಬಿಸಿಲಿನ ಝಳ ತಡೆಯಲಾರದೆ ಸಂಜೆಯ ವೇಳೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ನೆಲಮಂಗಲ: ಅಖಾಡದಲ್ಲಿ 16 ಅಭ್ಯರ್ಥಿಗಳು

ನೆಲಮಂಗಲ: ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 16 ಮಂದಿ ಉಳಿದಿದ್ದಾರೆ.ಭಾರತೀಯ ಪ್ರಜಾ ಪಕ್ಷದ ವಕೀಲ ರಾಮಯ್ಯ, ಸರ್ವೋದಯ ಪಕ್ಷದ ಎಂ.ರುದ್ರೇಶ್, ಪಕ್ಷೇತರ ಅಭ್ಯರ್ಥಿಗಳಾದ ಎಂ.ಜಿ.ಗಂಗರಾಮಯ್ಯ (ಕೆಜೆಪಿ ಬಂಡಾಯ), ಕೆ.ವೈ.ಪೆದ್ದಣ್ಣ ಮತ್ತು ಕೆ.ಒ.ಶಿವಪ್ರಕಾಶ್ ನಾಮಪತ್ರ ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಅಮರೇಶ್ ತಿಳಿಸಿದ್ದಾರೆ.ಕಣದಲ್ಲಿರುವ ಅಭ್ಯರ್ಥಿಗಳು: ಆಂಜನಮೂರ್ತಿ (ಕಾಂಗ್ರೆಸ್), ಎಂ.ವಿ.ನಾಗರಾಜು (ಬಿಜೆಪಿ), ಡಾ.ಕೆ. ಶ್ರೀನಿವಾಶಮೂರ್ತಿ (ಜೆಡಿಎಸ್), ಡಾ.ಸಿ.ಹನುಮಯ್ಯ (ಬಿಎಸ್‌ಪಿ), ಎಚ್.ಪಿ.ಚೆಲುವರಾಜು (ಕೆಜೆಪಿ), ಗಂಗಬೈಲಪ್ಪ (ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಪಕ್ಷ), ಬಿ.ರಾಮಯ್ಯ (ಬಿಎಸ್‌ಆರ್ ಕಾಂಗ್ರೆಸ್), ಎಸ್.ಲೇಪಾಕ್ಷಿ (ಜೆಡಿಯು), ಆಂಜನಮೂರ್ತಿ, ಜಿ. ಕುಮಾರ್, ಡಾ.ಚೌಡಯ್ಯ, ತಿರುಮಲಯ್ಯ, ಎನ್.ಜಿ.ಪೂಜಪ್ಪ, ಬಿ.ಸಿ.ರಾಮಣ್ಣ, ಜಿ.ಎಂ. ಶ್ರೀನಿವಾಸ್, ಬಿ.ವಿ.ಸತೀಶ್ ಚಂದ್ರ (ಎಲ್ಲರೂ ಪಕ್ಷೇತರರು)ರಾಜರಾಜೇಶ್ವರಿನಗರ: ಮೂವರು ನಾಮಪತ್ರ ವಾಪಸ್

ರಾಜರಾಜೇಶ್ವರಿನಗರ: ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹನುಮಂತರಾಯಪ್ಪ ನಾಮಪತ್ರ ವಾಪಸ್ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಆರ್.ಆನಂದ್ ಮತ್ತು ಶ್ರೀನಿವಾಸ್ ನಾಮಪತ್ರ ವಾಪಸ್ ಪಡೆದಿದ್ದಾರೆ.ಯಶವಂತಪುರ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ದೀಪಕ್ ಸಿ.ಎನ್., ಪಕ್ಷೇತರ ಅಭ್ಯರ್ಥಿಗಳಾದ ಸಿ.ಆರ್.ನಾಗರಾಜ್ ಮತ್ತು ಎಸ್.ಪ್ರಭು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ರಂಗಪ್ಪ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)