ಭಾನುವಾರ, ಜೂನ್ 13, 2021
25 °C

ಚುನಾವಣಾ ಚುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲೇಶ್‌ ಹೋರ್ಡಿಂಗ್‌ ತೆರವು

ಲಖನೌ (ಐಎಎನ್‌ಎಸ್‌):
ಉತ್ರ ಪ್ರದೇಶದಾದ್ಯಂತ ರಾರಾಜಿಸುತ್ತಿದ್ದ ಮುಖ್ಯಮಂತ್ರಿ ಅಖಿಲೇಶ ಯಾದವ್‌ ಅವರ ಭಾವಚಿತ್ರಗಳನ್ನು ಹೊತ್ತ ಫಲಕಗಳನ್ನು (ಹೋರ್ಡಿಂಗ್‌) ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.ಚುನಾವಣಾ ನೀತಿಸಂಹಿತೆ  ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲ ಫಲಕಗಳನ್ನು ತೆರವುಗೊಳಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ವಾರ್ತಾ ಇಲಾಖೆಗೆ ಸೂಚಿಸಿದ್ದರು.ಕಾಂಗ್ರೆಸ್‌ ಮಾನ್ಯತೆ ರದ್ದತಿಗೆ ಆಗ್ರಹ

ನವದೆಹಲಿ (ಐಎಎನ್‌ಎಸ್‌):
ಮತ್ತೆ ಮತ್ತೆ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕಾಂಗ್ರೆಸ್‌ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ಆಗ್ರಹಿಸಿದೆ.ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಅವರ ಪಕ್ಷದ ಇತರರು ನೀತಿ ಸಂಹಿತೆಯನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.ಮಹಾತ್ಮ ಗಾಂಧಿ ಹತ್ಯೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ನಂಟಿದೆ ಎಂಬ ರಾಹುಲ್‌ ಹೇಳಿಕೆಯನ್ನು ಬಿಜೆಪಿಯು ಪತ್ರದಲ್ಲಿ ಪ್ರಸ್ತಾಪಿಸಿದೆ.‘ರಾಹುಲ್‌ ಗಾಂಧಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸದಸ್ಯರ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ವಿವಿಧ ಸಮುದಾಯಗಳ ಸದಸ್ಯರಲ್ಲಿ ಧಾರ್ಮಿಕ ಭಾವನೆ ಕೆರಳುವಂತೆ ಅವರು ಮಾತನಾಡಿದ್ದಾರೆ’ ಎಂದು ಬಿಜೆಪಿ  ಹೇಳಿದೆ. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್‌ಗೆ ನಂಟಿದೆ ಎಂದು ಮಹಾರಾಷ್ಟ್ರದ ಠಾಣೆಯಲ್ಲಿ ರಾಹುಲ್‌ ನೀಡಿದ ಹೇಳಿಕೆ ವಿರುದ್ಧ ಆರ್‌ಎಸ್ಎಸ್‌ ಶುಕ್ರವಾರವೇ ಆಯೋಗಕ್ಕೆ ದೂರು ನೀಡಿತ್ತು.ಹಣ ವರ್ಗಾವಣೆ: ಸೆಬಿ ನಿಗಾ

ನವದೆಹಲಿ(ಪಿಟಿಐ):
ಲೋಕಸಭೆ ಚುನಾವಣೆ ಹತ್ತಿರ­ವಾಗುತ್ತಿದ್ದಂತೆಯೇ ಕಂಪೆನಿಗಳು ಮತ್ತು ಇತರರು ಷೇರು ಮಾರುಕಟ್ಟೆ ಅಥವಾ ವಿವಿಧ ಹೂಡಿಕೆ ಯೋಜನೆಗಳ ಮೂಲಕ ಅಕ್ರಮ ಹಣವನ್ನು ಚುನಾವಣೆಗೆ ಬಳಸುವುದನ್ನು ತಡೆಯಲು ಭಾರತೀಯ ಷೇರುಪೇಟೆ  ನಿಯಂತ್ರಣ ಮಂಡಳಿ (ಸೆಬಿ) ತನ್ನ ಕಣ್ಗಾವಲನ್ನು ಬಲಪಡಿಸಿದೆ.ಪಕ್ಷಗಳು ಮತದಾರರನ್ನು ಸೆಳೆಯಲು ಷೇರು ಮಾರುಕಟ್ಟೆ  ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸಾಧ್ಯತೆ ಇದೆ ಎಂದು ಸೆಬಿ ತೀವ್ರ ಕಳವಳ ವ್ಯಕ್ತಪಡಿಸಿದೆ.ಹಲವು ಕಂಪೆನಿಗಳು ನಕಲಿ ಹೂಡಿಕೆದಾರರ ಹೆಸರಿನಲ್ಲಿರುವ ಖಾತೆಗಳ ಮೂಲಕ ದೊಡ್ಡ ಮೊತ್ತದ ಹಣ ವರ್ಗಾಯಿಸು­ವುದಕ್ಕೆ ಹುನ್ನಾರ ನಡೆಸಿರುವುದರ ಸೂಚನೆಗಳು ದೊರೆತಿವೆ. ನಂತರ ಈ ಹಣವನ್ನು ಚುನಾವಣೆಗೆ ಬಳಸುವ ಉದ್ದೇಶವನ್ನು ಅವರು ಹೊಂದಿರಬಹುದು ಎಂದು ಸೆಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.