ಗುರುವಾರ , ನವೆಂಬರ್ 21, 2019
25 °C

ಚುನಾವಣಾ ಪ್ರಚಾರ ರಾಜ್ಯಕ್ಕೆ ಪ್ರಧಾನಿ, ಸೋನಿಯಾ, ರಾಹುಲ್

Published:
Updated:

ಬೆಂಗಳೂರು (ಪಿಟಿಐ): ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆ.`ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಾರ ಪ್ರಧಾನಿ ಅವರು ಏ. 29 ರಂದು ಹುಬ್ಬಳ್ಳಿ ಮತ್ತು ಬೆಂಗಳೂರು, ಮೇ 2ರಂದು ಮೈಸೂರಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಸೋನಿಯಾ ಗಾಂಧಿ ಅವರು ಏ. 26ರಂದು ಚಿಕ್ಕಮಗಳೂರು ಮತ್ತು ಮಂಗಳೂರು, ಏ. 30ರಂದು ಬೆಳಗಾವಿ ಮತ್ತು ಗುಲ್ಬರ್ಗಾ ಹಾಗೂ ಮೇ 2ರಂದು ಮೈಸೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.ಇನ್ನು ರಾಹುಲ್ ಗಾಂಧಿ ಅವರು ಏ. 23ರಂದು ಬಳ್ಳಾರಿ, ರಾಯಚೂರು ಮತ್ತು ಬಿಜಾಪುರ, ಏ. 28ರಂದು ಕೋಲಾರ, ತುಮಕೂರು ಹಾಗೂ ಹಾವೇರಿಯಲ್ಲಿ ನಂತರ ಮೇ 1ರಂದು ಮೈಸೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಿ. ಪರಮೇಶ್ವರ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.ನಾಯಕರ ಪ್ರಚಾರ ವೇಳೆಯಲ್ಲಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗವಹಿಸಿ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಮರಳಿ ತರಲು ಶ್ರಮಿಸಲಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)