ಮಂಗಳವಾರ, ಜೂನ್ 15, 2021
26 °C
ಡಿವಿಎಸ್‌ ಪರ ಪ್ರಚಾರ: ಮೇ 31ರ ಬಳಿಕ ಹೊಸ ಹಾದಿ

ಚುನಾವಣಾ ರಾಜಕೀಯಕ್ಕೆ ಚಂದ್ರೇಗೌಡ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚುನಾವಣಾ ರಾಜಕೀಯ­ದಿಂದ ನಾನೀಗ ದೂರ ಸರಿದಿದ್ದೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರು­ತ್ತೇನೆ’ ಎಂದು ಬಿಜೆಪಿ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ ಹೇಳಿದರು.ನಗರದಲ್ಲಿ ಸೋಮವಾರ ಏರ್ಪ­ಡಿಸಲಾಗಿದ್ದ ಸಮಾರಂಭ­ವೊಂದ­ರಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮ ಪ್ರತಿ­ನಿಧಿಗಳ ಜತೆ ಮಾತನಾಡಿದರು.‘ಪ್ರಜಾಪ್ರಭುತ್ವದಲ್ಲಿ ಚರ್ಚೆ, ಮಾತುಕತೆಗಳು ಅಪೇಕ್ಷಿತ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ­ನಾದ ನನ್ನ ಜತೆ ಯಾವುದೇ ಚರ್ಚೆ ಮಾಡದೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಕ್ಕೆ ಈಗಲೂ ನನ್ನ ಆಕ್ಷೇಪ ಇದೆ’ ಎಂದು ಸ್ಪಷ್ಟಪಡಿಸಿದರು.‘ಚಂದ್ರೇಗೌಡರಿಗೆ ಟಿಕೆಟ್‌ ನಿರಾಕರಿಸಲಾಗಿದೆ, ಕೊಕ್‌ ನೀಡಲಾಗಿದೆ ಎನ್ನುವಂತಹ ಪದ ಬಳಕೆ ಮಾಡಲಾಗುತ್ತಿದೆ. ನನ್ನ ಮಟ್ಟಿಗೆ ಈ ಪದ­ಗಳ ಬಳಕೆ ಸರಿಯಲ್ಲ. ಏಕೆಂದರೆ, ನಾನು ಕೇವಲ ಟಿಕೆಟ್‌ ಅಪೇಕ್ಷಿತನಾಗಿದ್ದೆ. ಅದಕ್ಕಾಗಿ ಗೋಗರೆದು ನಿಂತಿರಲಿಲ್ಲ. ಅವಕಾಶಗಳು ಬಂದಾಗ ಸ್ವೀಕರಿಸಬೇಕು. ಸಿಗದಿರುವ ವಿಷಯಗಳ ಕುರಿತು ಚಿಂತಿಸುವ ಅಗತ್ಯವಿಲ್ಲ’ ಎಂದು ಅವರು ವಿವರಿಸಿದರು.‘ಕುಗ್ರಾಮದಿಂದ ಬಂದ ನಾನು 45 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿ ಹುದ್ದೆಯೊಂದನ್ನು ಬಿಟ್ಟು ಎಲ್ಲವನ್ನೂ ಅನುಭವಿಸಿದ್ದೇನೆ. ರಾಜ್ಯದ ಜನರ ಸೇವೆ ಮಾಡಿದ ತೃಪ್ತಿ ಮತ್ತು ನೆಮ್ಮದಿ ಕೂಡ ಇದೆ’ ಎಂದು ತಿಳಿಸಿದರು.‘ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಮೇ 31ರವರೆಗೆ ಆ ಪಕ್ಷದ ಸಂಸದ. ಬಳಿಕ ಆ ಹುದ್ದೆಯನ್ನು ಸದಾನಂದಗೌಡರಿಗೆ ಹಸ್ತಾಂತರಿಸಲು ಸಿದ್ಧನಿದ್ದೇನೆ. ಬೆಳಿಗ್ಗೆಯಷ್ಟೇ ಅವರ ಪ್ರಚಾರ ಕಚೇರಿಯನ್ನು ನಾನೇ ಉದ್ಘಾಟಿಸಿದ್ದೇನೆ. ಅವರ ಪರ ಪ್ರಚಾರವನ್ನೂ ಮಾಡಲಿದ್ದೇನೆ. ಮೇ 31ರ ಬಳಿಕ ಮುಂದಿನ ಹಾದಿಯನ್ನು ತುಳಿಯಲಿದ್ದೇನೆ’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.‘ಬಿಜೆಪಿಯನ್ನು ತೊರೆಯುತ್ತೀರಾ’ ಎಂದು ಪ್ರಶ್ನಿಸಿದಾಗ, ‘ಈಗ ಏನನ್ನೂ ಹೇಳುವುದಿಲ್ಲ. ಮೇ 31ರವರೆಗೆ ಕಾಯ್ದು ನೋಡಿ’ ಎಂದು ಆ ಕುತೂಹಲವನ್ನು ಹಾಗೇ ಉಳಿಸಿದರು.ಅಗತ್ಯ ನನಗಿಲ್ಲ

ನನ್ನನ್ನು ಅಭ್ಯರ್ಥಿಯಾಗಿ ಪರಿ­ಗಣಿ­ಸದೇ ಇರುವುದು ಏಕೆ ಎಂಬ ವಿವರಣೆ­ಯನ್ನು ಪಕ್ಷದ ಮುಖಂಡರು ನೀಡಿಲ್ಲ. ಅದನ್ನು ಕೇಳುವ ಅಗತ್ಯವೂ ನನಗಿಲ್ಲ.

–ಡಿ.ಬಿ. ಚಂದ್ರೇಗೌಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.