ಚುನಾವಣಾ ಸಮೀಕ್ಷೆ:ಒಬಾಮ ಮುಂದೆ

7

ಚುನಾವಣಾ ಸಮೀಕ್ಷೆ:ಒಬಾಮ ಮುಂದೆ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್/ಇಎಫ್‌ಇ): ಅಮೆರಿಕದಲ್ಲಿ ಮುಂಬರಲಿರುವ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಲ್ಲಿ ಶೇ  52ರಷ್ಟು ಮಂದಿ ಬರಾಕ್ ಒಬಾಮ ಅವರೇ ಅಭ್ಯರ್ಥಿಯಾಗಬೇಕೆಂದು ಬಯಸಿದ್ದರೆ, ಇನ್ನೊಬ್ಬ ಅಭ್ಯರ್ಥಿ ಮಿಟ್ ರೋಮ್ನಿ ಅವರಿಗೆ ಶೇ 43ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ ಎಂದು `ವಾಷಿಂಗ್ಟನ್ ಪೋಸ್ಟ್~ ಮತ್ತು `ಎಬಿಸಿ ನ್ಯೂಸ್~ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನಕ್ಕೆ ತಾವು ಅರ್ಹ ಎಂದು ಒಬಾಮ ಅವರು ಹೇಳಿಕೆ ನೀಡಿದ ಮಾರನೇ ದಿನ ಸಮೀಕ್ಷೆಯ ಫಲಿತಾಂಶ ಹೊರಬಂದಿದೆ. ತಮ್ಮ ಆಡಳಿತದಿಂದ ರಾಷ್ಟ್ರದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿದೆ ಎಂದೂ ಒಬಾಮ ಟಿ.ವಿ ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡಿದ್ದರು.ಈ ತಿಂಗಳ ಮೊದಲ ವಾರ ಸುಮಾರು ಒಂದು ಸಾವಿರ ವಯಸ್ಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ.ನೋಂದಾಯಿತ ಮತದಾರರಲ್ಲಿ ಒಬಾಮ ಅವರಿಗೆ ಶೇ 51ರಷ್ಟು ಬೆಂಬಲ ವ್ಯಕ್ತವಾಗಿದೆ. ಲಾಡೆನ್ ಹತ್ಯೆಯ ಬಳಿಕ ಒಬಾಮ ಪರ ಬೆಂಬಲದಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಳ ಕಂಡುಬಂದಿದ್ದರೂ ಶೇ 46ರಷ್ಟು ಮಂದಿ ಒಬಾಮ ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಂದು `ವಾಷಿಂಗ್ಟನ್ ಪೋಸ್ಟ್~ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry