ಚುನಾವಣೆಗೆ ಇಂಗ್ಲಿಷ್ ಅಡ್ಡಿ!

7

ಚುನಾವಣೆಗೆ ಇಂಗ್ಲಿಷ್ ಅಡ್ಡಿ!

Published:
Updated:

ಟಕ್‌ಸನ್ (ಅಮೆರಿಕ) (ಐಎಎನ್‌ಎಸ್/ಇಎಫ್‌ಇ): ಸರಿಯಾಗಿ ಇಂಗ್ಲಿಷ್ ಭಾಷೆ ಮಾತನಾಡಲಾರರು ಎಂಬ ಏಕೈಕ ಕಾರಣಕ್ಕೆ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ಅರಿಜೋನಾ ಕೋರ್ಟ್ ತೀರ್ಪು ನೀಡಿದೆ.ಅಲಿಜಾಂಡ್ರಿನಾ ಕ್ಯಾಬ್‌ರೆರಾ ಎಂಬುವವರು ಸ್ಯಾನ್ ಲೂಯಿಸ್ ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದರು. ಆದರೆ, ತೀರ್ಪಿನಿಂದ ಅವರಿಗೆ ತೀವ್ರ ನಿರಾಸೆಯಾಗಿದೆ. ಜನಗಣತಿ ಪ್ರಕಾರ, ಸ್ಯಾನ್ ಲೂಯಿಸ್ ಕ್ಷೇತ್ರದ ಶೇ 87ರಷ್ಟು ನಿವಾಸಿಗಳು ಇಂಗ್ಲಿಷ್ ಹೊರತುಪಡಿಸಿ ಅನ್ಯ ಭಾಷೆಯಲ್ಲಿ ಮಾತನಾಡುತ್ತಾರೆ. ಶೇ 98ರಷ್ಟು ಜನ ಸ್ಪೇನ್ ಮೂಲದವರು.`ನನಗೆ ಇದನ್ನು ನಂಬಲು ಆಗುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸದ ಕೋರ್ಟ್, ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ. ಸ್ಪೇನ್ ಮೂಲದವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರ್ಬಂಧಿಸುವ ಈ ತೀರ್ಪು  ಅಪಾಯಕಾರಿ~ ಎಂದು   ಕ್ಯಾಬ್‌ರೆರಾ ವಕೀಲರು ಹೇಳಿದ್ದಾರೆ.ಪಾಲಿಕೆ ಸದಸ್ಯತ್ವದ ಹೊಣೆ ನಿರ್ವಹಿಸಲು ಅಗತ್ಯವಾದ ಇಂಗ್ಲಿಷ್ ಜ್ಞಾನ ಅವರಿಗಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಮೂರ್ತಿಗಳು ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಕ್ಯಾಬ್‌ರೆರಾ ತಡಬಡಾಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry