ಮಂಗಳವಾರ, ಜೂನ್ 15, 2021
27 °C

ಚುನಾವಣೆ: ಆರು ಕಡೆ ಚೆಕ್‌ಪೋಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಚುನಾವಣಾ ಅಕ್ರಮ ತಡೆಯಲು ವಿಧಾನಸಭಾ ಕ್ಷೇತ್ರದ 6 ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ತಿಳಿಸಿದರು.ಕ್ಷೇತ್ರದ ಮಹದೇವಪುರ– ಮೈಸೂರು ಜಂಕ್ಷನ್‌, ಪಟ್ಟಣದ ಪ್ರವೇಶ ದ್ವಾರ, ಕೆಆರ್‌ಎಸ್‌ನ ರೈಲು ನಿಲ್ದಾಣ, ಬೆಳಗೊಳ ಪೇಪರ್‌ಮಿಲ್‌ ವೃತ್ತದ ಇಲವಾಲ ಸಂಪರ್ಕ ರಸ್ತೆ, ಮೊಗರಹಳ್ಳಿ, ಬೊಂತಹಗಳ್ಳಿ ಹಾಗೂ ಬನ್ನೂರು ಜಂಕ್ಷನ್‌ಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಆ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಜತೆಗೆ 3 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ. 14 ಮಂದಿ ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಿದ್ದು, ಅವರು ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ಗಳಾಗಿಯೂ ಕೆಲಸ ಮಾಡಲಿದ್ದಾರೆ. ಪ್ರಕರಣ ದಾಖಲಿಸುವ ಅಧಿಕಾರವನ್ನೂ ಅವರು ಹೊಂದಿರುತ್ತಾರೆ ಎಂದು ಹೇಳಿದರು.ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿದ್ದು, 10,949 ಮಹಿಳಾ ಮತ್ತು 1,0106 ಪುರುಷ ಮತದಾರರು ಇದ್ದಾರೆ. ಗಂಜಾಂನ 6ನೇ ವಾರ್ಡ್‌ನ ಮತಗಟ್ಟೆಯಲ್ಲಿ ಅತಿಹೆಚ್ಚು ಅಂದರೆ, 1499 ಮತದಾರರು ಇದ್ದು, ಚಿನ್ನೇನಹಳ್ಳಿ ಮತಕೇಂದ್ರದಲ್ಲಿ ಕೇವಲ 322 ಮತದಾರರು ಇದ್ದಾರೆ.ಭಾನುವಾರ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ, ತೆಗಯುವ ಮತ್ತು ತಿದ್ದುಪಡಿಗೆ ಶಿಬಿರ ತೆರದು ಅರ್ಜಿ ಸ್ವೀಕರಿಸಲಾಗಿದೆ. ಮಾರ್ಚ್‌ 16ರವರೆಗೆ ಮಿನಿ ವಿಧಾನಸೌಧದಲ್ಲಿ ಖುದ್ದು ಅರ್ಜಿ ಸಲ್ಲಿಸಲೂ ಅವಕಾಶ ಇದೆ ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.