ಮಂಗಳವಾರ, ನವೆಂಬರ್ 19, 2019
23 °C

ಚುನಾವಣೆ: ಗಡಿ ಭಾಗದಲ್ಲಿ ಕಟ್ಟೆಚ್ಚರ

Published:
Updated:

ಸೋಮವಾರಪೇಟೆ: ಚುನಾವಣಾ ಅಕ್ರಮ ತಡೆಯಲು ಹಾಸನ ಜಿಲ್ಲೆಯ ಗಡಿ ಬಾಣಾವಾರ ಗೇಟ್ ಮೂಲಕ ತಾಲ್ಲೂಕಿಗೆ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡ ಲಾಗುತ್ತಿದೆ.  ಚುನಾವಣಾ ವಲಯ ಅಧಿಕಾರಿಗಳು, ಉತ್ತರ ಪ್ರದೇಶದ ಸಶಸ್ತ್ರ ಮೀಸಲು ಪಡೆ ಹಾಗೂ ಸೋಮವಾರಪೇಟೆ ಪೊಲೀಸರು ಗಡಿ ಪ್ರದೇಶದಲ್ಲಿ ದಿನದ 24ಗಂಟೆಯೂ ತಪಾಸಣೆ ಮಾಡುತ್ತಿದ್ದಾರೆ.ಹಾಸನ ಜಿಲ್ಲೆಯ ಮರಿಯನಗರ, ಕೊಡಗು ಜಿಲ್ಲೆಯ ಶನಿವಾರಸಂತೆ, ಕುಶಾಲನಗರ ಮತ್ತು ಸೋಮವಾರ ಪೇಟೆ ಕಡೆಗಳಿಂದ ಹೋಗುವ ವಾಹನಗಳನ್ನು ಬಾಣಾವರ ಗೇಟ್ ಬಳಿ ತಪಾಸಣೆ ಮಾಡಲಾಗುತ್ತದೆ. ಹಣ. ಮದ್ಯ, ಉಡುಗೊರೆಗಳನ್ನು ಸಾಗಣೆ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರತಿಕ್ರಿಯಿಸಿ (+)