ಶನಿವಾರ, ಜೂನ್ 12, 2021
23 °C

ಚುನಾವಣೆ ಚುರುಮುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಸಾಲೆ ಅರೆಯುವುದು ಗುರಿಯೇ?’

ತುಮಕೂರು:
‘ನಾನು ಒಂದು ಗುರಿ ಇಟ್ಟುಕೊಂಡು ಕಾಂಗ್ರೆಸ್‌ಗೆ ಬಂದಿದ್ದೇನೆ’ ಎಂದು ಕಾಂಗ್ರೆಸ್‌ ಸೇರ್ಪಡೆಯಾದ ಮಸಾಲೆ ಜಯರಾಂ ಹೇಳಿದರು. ಅದೇನು ಗುರಿ ಹೇಳಿ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರು. ತಮ್ಮ ಗುರಿಯನ್ನು ಅವರು ಕೊನೆಗೂ ಬಹಿರಂಗ ಪಡಿಸಲಿಲ್ಲ. ಹಿಂದೆ ಇದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, ಬಹುಶಃ ಅಭ್ಯರ್ಥಿಗೇ ಮಸಾಲೆ ಅರೆಯುವು ಜಯರಾಂ ಗುರಿ ಇರಬಹುದು ಎಂದು ಹೇಳಿದರು.ಸೊಸೆ ಮೇಲೆ ಸಿಟ್ಟೇ?

ತುಮಕೂರು:
ನಗರದಲ್ಲಿ ಬುಧವಾರ ಎಚ್‌.ಡಿ.ದೇವೇಗೌಡರು ಪತ್ರಕರ್ತರೊಂದಿಗೆ ಅಪರೂಪಕ್ಕೆ ಅಸನ್ಮುಖಿಯಾಗಿ ಮಾತನಾಡುತ್ತಿದ್ದರು. ಪಕ್ಕದಲ್ಲಿಯೇ ಇದ್ದ ಪತ್ರಕರ್ತರೊಬ್ಬರ ಕೈಯನ್ನು ಎತ್ತಿ ಹಿಡಿದುಕೊಂಡು ಇನ್ನಿಲ್ಲದ ಒಲವು ತೋರಿಸಿದರು. ಇದೇ ಸಂದರ್ಭ, ಅದೇ ಪತ್ರಕರ್ತ ದೇವೇಗೌಡರಿಗೆ ‘ಮಂಡ್ಯದಿಂದ ನಿಮ್ಮ ಸೊಸೆ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುತ್ತೀರಾ?’ ಎಂಬ ಪ್ರಶ್ನೆ ಒಗೆದರು.ಅದೆಲ್ಲಿತ್ತೊ ದೇವೇಗೌಡರಿಗೆ ಸಿಟ್ಟು, ಹಿಡಿದಿದ್ದ ಪತ್ರಕರ್ತನ ಕೈಯನ್ನು ಬಿರುಸಾಗಿ ಎತ್ತಿ ಒಗೆದು ಬಿರುಬಿರನೆ ಹೆಜ್ಜೆ ಹಾಕಿದರು. ಸೊಸೆ ಹೆಸರೆತ್ತಿದ ತಕ್ಷಣ ದೇವೇಗೌಡರಿಗೆ ಸಿಟ್ಟು ಬಂದಿದ್ದೇಕೆ ಎಂದು ಯಾರಿಗೂ ಅರ್ಥವಾಗಲಿಲ್ಲ.ಪಕ್ಕಾ ಕಾಂಗ್ರೆಸಿಗ... ಪಕ್ಕಾ ಮಾದಿಗ...

ಶಿರಾ:
ನಾನು ಪಕ್ಕಾ ಕಾಂಗ್ರೆಸಿಗ... ಹಾಗೆಯೇ ಪಕ್ಕಾ ಮಾದಿಗನೂ ಹೌದು. – ಹೀಗೆ ಘೋಷಿಸಿದವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ.ನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಕ್ಷೇತ್ರದಲ್ಲಿ ವಿವಿಧ ರೀತಿಯ ವದಂತಿ ಹಬ್ಬುತಿದ್ದು, ನಾನು ಲಿಕ್ಕರ್ ಚಂದ್ರಪ್ಪ ಅಲ್ಲ; ಲಿಡ್ಕರ್ ಚಂದ್ರಪ್ಪ ಎಂದರು.ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಿಡ್ಕರ್ ಸಂಸ್ಥೆಗೆ ಅಧ್ಯಕ್ಷ ಆಗಿದ್ದೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.ನನ್ನನ್ನೂ ‘ಜಯ ಚಂದ್ರ‘ ಮಾಡಿ

ಶಿರಾ:
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಂದ್ರಪ್ಪನಾದ ನನಗೆ ಮತ ನೀಡಿ, ನನ್ನನ್ನೂ ‘ಜಯ ಚಂದ್ರ’ನನ್ನಾಗಿ ಮಾಡಿ ಎಂದು ಚಂದ್ರಪ್ಪ ಮನವಿ ಮಾಡಿದರು. ವೇದಿಕೆಯಲ್ಲಿದ್ದ ಸಚಿವ ಜಯಚಂದ್ರ ಇದನ್ನು ತಮ್ಮ ಹೊಗಳಿಕೆ ಎಂದು ಭಾವಿಸಿ, ಮುಗುಳ್ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.