ಮಂಗಳವಾರ, ನವೆಂಬರ್ 12, 2019
28 °C

`ಚುನಾವಣೆ ನಂತರವೂ ಅಭಿಯಾನ'

Published:
Updated:

ಬೆಂಗಳೂರು: `ಮತದಾರರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿರುವ `ನಮ್ಮ ಮತ ಮಾರಾಟಕ್ಕಿಲ್ಲ' ಎಂಬ ಅಭಿಯಾನವನ್ನು ಚುನಾವಣೆಯ ನಂತರವೂ ಮುಂದುವರೆಸಲಾಗುವುದು' ಎಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರಧಾನ ಕಾರ್ಯದರ್ಶಿ ದಾಮೋದರ ಆಚಾರ್ಯ  ಹೇಳಿದರು.ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಮತದಾರರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ರಾಜ್ಯದ 19 ಜಿಲ್ಲೆಗಳ 42 ತಾಲ್ಲೂಕುಗಳಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ. ವಿವಿಧ ಸಂಘಟನೆಗಳ ಮಹಿಳಾ ಸದಸ್ಯೆಯರು ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಪ್ರಮುಖ ಅಂಶ.ಅಭಿಯಾನವನ್ನು ಈ ಚುನಾವಣೆ ಗೆ ಮಾತ್ರ ಸೀಮಿತಗೊಳಿಸದೆ ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ನಿರಂತರವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)