ಚುನಾವಣೆ: ಸ್ಥಳೀಯರಿಗೆ ಆದ್ಯತೆ ನೀಡಲು ಮನವಿ

7

ಚುನಾವಣೆ: ಸ್ಥಳೀಯರಿಗೆ ಆದ್ಯತೆ ನೀಡಲು ಮನವಿ

Published:
Updated:

ಮಹದೇವಪುರ: `ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು' ಎಂದು ಮಹದೇವಪುರ ನಗರಸಭಾ ಮಾಜಿ ಅಧ್ಯಕ್ಷ ಗುಟ್ಟದ ಪಿ.ರಾಜಣ್ಣ ಒತ್ತಾಯಿಸಿದರು.ಮಹದೇವಪುರದ ವೈಟ್‌ಫೀಲ್ಡ್‌ನಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಕ್ಷೇತ್ರದಲ್ಲಿ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ 60 ಸಾವಿರಕ್ಕೂ ಅಧಿಕ ಜನರು ಇದ್ದಾರೆ. ಆದಿ ಕರ್ನಾಟಕದ ಮುಖಂಡರನ್ನು ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಂಡು ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು' ಎಂದು ಅವರು ವಿನಂತಿಸಿದರು.ಮಹದೇವಪುರ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ನಲ್ಲೂರುಹಳ್ಳಿ ಟಿ.ನಾಗೇಶ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಕೆ.ಎಂ.ನಾಗರಾಜ್, ಸುಬ್ಬಣ್ಣ ವರ್ತೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry