ಶುಕ್ರವಾರ, ನವೆಂಬರ್ 22, 2019
23 °C

ಚೂರಿ ಇರಿತಕ್ಕೆ ಒಬ್ಬ ಬಲಿ

Published:
Updated:

ದೊಡ್ಡಬಳ್ಳಾಪುರ:  ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮಲಗುಂಟೆ ಗ್ರಾಮದಲ್ಲಿ ನಿವೇಶನ ಹಂಚಿಕೆ ವಿಚಾರವಾಗಿ ಸಂಬಂಧಿಗಳ ನಡುವೆ ಸೋಮವಾರ ರಾತ್ರಿ ನಡೆದ ಗಲಾಟೆಯಲ್ಲಿ ಒಬ್ಬ ಯುವಕ ಮೃತಪಟ್ಟಿದ್ದಾನೆ.ಮೃತ ಯುವಕನನ್ನು ರಂಗಸ್ವಾಮಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.`ಅಮಲಗುಂಟೆ ಗ್ರಾಮದಲ್ಲಿನ ನಿವೇಶನದ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಗ್ರಾಮಸ್ಥರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿಗಳನ್ನು ಮಾಡಲಾಗಿತ್ತು.ಪಂಚಾಯಿತಿ ಮುಖಂಡರ ಮಾತಿಗೆ ಬೆಲೆ ನೀಡದೆ ಇಡೀ ನಿವೇಶನ ನಮಗೇ ಸೇರಬೇಕು ಎಂದು ಗಂಗಾಧರ ಪಟ್ಟು ಹಿಡಿದು ರಂಗಸ್ವಾಮಿ ಮೇಲೆ ಹಲ್ಲೆ ನಡೆಸುವ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ರಂಗಸ್ವಾಮಿ ಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಈ ಗಲಾಟೆ ಸಂಭವಿಸಿದೆ' ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾಧರನ ಮೇಲೆ ಈಗಾಗಲೇ ಎರಡು ವಿವಿಧ ಹಲ್ಲೆ ಪ್ರಕರಣಗಳು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎನ್ನಲಾಗಿದೆ. ಘಟನೆ ನಂತರ ಗಂಗಾಧರ ತಲೆ ಮರೆಸಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಂಗಮ್ಮ, ತಿಮ್ಮರಾಜು ಅವರನ್ನು  ಬಂಧಿಸಲಾಗಿದೆ.ಹೊಸಹಳ್ಳಿ ಪೊಲೀಸರು ದೂರು ದಾಖಲಿಸಿಕೊಡು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ.

ಪ್ರತಿಕ್ರಿಯಿಸಿ (+)