ಶುಕ್ರವಾರ, ನವೆಂಬರ್ 22, 2019
20 °C

ಚೆಂದೂರ, ಐಚಂಡ ತಂಡಗಳಿಗೆ ಜಯ

Published:
Updated:

ವಿರಾಜಪೇಟೆ: ಚೆಂದೂರ ಮತ್ತು ಐಚಂಡ ತಂಡಗಳು ಬಾಳುಗೋಡಿನಲ್ಲಿ ನಡೆಯುತ್ತಿರುವ ಮಾದಂಡ ಕಪ್ -2013 ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಬುಧವಾರ ಜಯಭೇರಿ ಬಾರಿಸಿದವು.ಬೆಳಿಗ್ಗೆ ನಡೆದ ಪಂದ್ಯದಲ್ಲಿ ಚೆಂದೂರ ತಂಡವು 3-0 ಗೋಲುಗಳಿಂದ ಪುಚ್ಚಿಮಂಡ ವಿರುದ್ಧ ಗೆಲುವು ಸಾಧಿಸಿತು. ಚೆಂದೂರ   ತಂಡದ ಪರವಾಗಿ ರಾಜ(4ನೇ ನಿ.) ಬಿಪಿನ್(7ನೇ ನಿ.), ಸುರೇಶ್(40ನೇ ನಿ) ಗೋಲು ಗಳಿಸಿದರು.ಇನ್ನೊಂದು ಪಂದ್ಯದಲ್ಲಿ ಐಚಂಡ ತಂಡವು 5-1 ರಿಂದ ಮರ್ಚಂಡ ವಿರುದ್ಧ ಜಯಿಸಿತು.  ಐಚಂಡ ಪರವಾಗಿ ಪಳಂಗಪ್ಪ (11 ಮತ್ತು 40ನೇ ನಿ.), ತಿಮ್ಮಯ್ಯ(13ನೇ ನಿ.), ನಾಣಯ್ಯ(36ನೇ ನಿ.),ದೇವಯ್ಯ(43ನೇ ನಿ) ಗೋಲುಗಳನ್ನು ಬಾರಿಸಿದರು. ಮರ್ಚಂಡ ತಂಡದ ಪರವಾಗಿ ಸಚಿನ್(38ನೇ ನಿ) ಒಂದು ಗೋಲು ಹೊಡೆದರು.ಇನ್ನುಳಿದ ಪಂದ್ಯಗಳಲ್ಲಿ;  ಪೊನ್ನೊಳ್‌ತಂಡವು 2-1ರಿಂದ ಬಾಳೆಯಡ ತಂಡದ ವಿರುದ್ಧ ಜಯ ಸಾಧಿಸಿತು. ಪೊನ್ನೊಳ್ ತಂಡದ ಪರವಾಗಿ ಕಾವೇರಪ್ಪ(16 ಮತ್ತು 40ನೇ ನಿ), ಬಾಳೆಯಡ ತಂಡದ ಪರವಾಗಿ ಕವನ್(3ನೇ ನಿ) ಗೋಲು ಹೊಡೆದರು.ಚೋಯಮಾಡಂಡ ತಂಡವು 4-0ಯಿಂದ ಅಪ್ಪಚ್ಚಿರ  ವಿರುದ್ಧ ಗೆಲುವು ಸಾಧಿಸಿತು. ಚೋಯಮಾಡಂಡ ತಂಡದ ಪರವಾಗಿ ಚಂಗಪ್ಪ(14ನೇ ನಿ), ಸುಬ್ರಮಣಿ(24ನೇ ನಿ), ಚಿಣ್ಣಪ್ಪ(38 ಮತ್ತು 42ನೇ ನಿ), ಗೋಲು ಹೊಡೆದರು.ತಂಬುಕುಟ್ಟೀರ ತಂಡವು, ಮುಕ್ಕಾಟಿರ ತಂಡದ ವಿರುದ್ದ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ತಂಬುಕುಟ್ಟೀರದ ಉದಯ್ ಉತ್ತಯ್ಯ(17ನೇ ನಿ), ದೀಪು ಚಂಗಪ್ಪ(34ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.  ಚೇಂದಂಡ ತಂಡವು, ಚಿಂಡಮಾಡ ತಂಡದ ವಿರುದ್ದ 3-0 ಗೋಲುಗಳಿಂದ ಗೆದ್ದಿತು. ಚೇಂದಂಡ ತಂಡದ ಪರವಾಗಿ ಮೋಕ್ಷಿತ್(5ನೇ ನಿ), ಸುಬ್ಬಯ್ಯ(35ನೇ ನಿ) ಹಾಗೂ ಚಿರಾಗ್(39ನೇ ನಿ) ಗೋಲು ಗಳಿಸಿದರು.ಇದೇ ಅವಧಿಯಲ್ಲಿ ನಡೆದ ಪಂದ್ಯಾಟದಲ್ಲಿ ಕಾಂಡಂಡ ತಂಡವು, ಕಾಂಡೇರ ತಂಡದ ವಿರುದ್ಧ 4-1 ಗೋಲುಗಳಿಂದ ಜಯಿಸಿತು. ಕಾಂಡಂಡ ತಂಡದ ಪರವಾಗಿ ಬೋಪಯ್ಯ(15ನೇ ನಿ),ಚಂಗಪ್ಪ 2(18 ಮತ್ತು 47ನೇ ನಿ),ಮಾದಯ್ಯ(49ನೇ ನಿ), ಹಾಗೂ ಕಾಂಡೇರ ತಂಡದ ಪರವಾಗಿ ತಿಮ್ಮಯ್ಯ(40ನೇ ನಿ) ಗೋಲು ಗಳಿಸಿದರು.ಮೂಡೇರ ತಂಡವು, ಗಂಡಂಗಡ ತಂಡದ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮೂಡೇರ ತಂಡದ ಪರವಾಗಿ ಮಂಜು(16 ಮತ್ತು 20ನೇ ನಿ), ಹರೀಶ್(22ನೇ ನಿ), ಡಾನ್(35ನೇ ನಿ) ಗೋಲು ಬಾರಿಸಿದರು.ಚೌರೀರ ತಂಡವು 1-0ಯಿಂದ ನಂಬುಡುಮಾಡ ವಿರುದ್ಧ ಜಯ ಸಾಧಿಸಿತು. ಚೌರೀರ ಪರವಾಗಿ ಧನು ನಾಣಯ್ಯ (36ನೇ ನಿ) ಗೆಲುವಿನ ಗೋಲು ಬಾರಿಸಿದರು.ಅಜ್ಜೆಟ್ಟಿರ ತಂಡವು 3-0ಯಿಂದ ನಂಬುಡ್‌ಮಂಡ ತಂಡದ ವಿರುದ್ಧ ಗೆದ್ದಿತು. ಅಜ್ಜೆಟ್ಟಿರ ಪರವಾಗಿ ವಿಕ್ರಮ್ ಉತ್ತಪ್ಪ(14ನೇ ನಿ), ನವೀನ್ ನಾಚಪ್ಪ(32ನೇ ನಿ), ಮೋಹನ್ ಸೋಮಣ್ಣ(40ನೇ ನಿ) ವಿಜಯದ ಗೋಲು ಹೊಡೆದರು.ಕೇಳೇಟಿರ ತಂಡವು 4-1ರಿಂದ ಬಲ್ಲಚಂಡ ವಿರುದ್ಧ ಗೆದ್ದಿತು. ಕೇಳೇಟಿರ ತಂಡದ ಪರವಾಗಿ ಪುನೀತ್ ಹ್ಯಾಟ್ರಿಕ್ ಗೋಲುಗಳನ್ನು(16,20,24ನೇ ನಿ) ಬಾರಿಸಿದರು. ಕಾರ್ಯಪ್ಪ(47ನೇ ನಿ) ಒಂದು ಗೋಲು, ಹಾಗೂ ಬಲ್ಲಚಂಡ ತಂಡದ ಪರವಾಗಿ ಪೂಣಚ್ಚ(11ನೇ ನಿ) ಒಂದು ಗೋಲನ್ನು ಬಾರಿಸಿದರು.

ಪ್ರತಿಕ್ರಿಯಿಸಿ (+)