ಬುಧವಾರ, ಮೇ 12, 2021
19 °C

ಚೆಕ್‌ಗಳ ಡಿ.ಡಿಗಳ ಕಾಲಮಿತಿ 3 ತಿಂಗಳಿಗೆ ಸೀಮಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ) ಚೆಕ್  ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು  ನಗದುಗೊಳಿಸುವ ಕಾಲಮಿತಿಯನ್ನು ಆರು ತಿಂಗಳಿಂದ ಮೂರು ತಿಂಗಳಿಗೆ ತಗ್ಗಿಸಿದೆ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ.ಈ ಮೊದಲು ಚೆಕ್‌ಗಳು ಮತ್ತು ಡಿ.ಡಿಗಳನ್ನು ನಗದುಗೊಳಿಸಲು ಆರು ತಿಂಗಳ ಕಾಲಾವಕಾಶ ಇತ್ತು. ಆದರೆ, ಏಪ್ರಿಲ್ 1ರಿಂದ ನಿಯಮ ಬದಲಾಗಿದೆ.  ವಂಚನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ `ಆರ್‌ಬಿಐ~ ಈ ಕ್ರಮ ಕೈಗೊಂಡಿದೆ. ಇದರ ಜತೆಗೆ ಇತರೆ ಬ್ಯಾಂಕ್ ಪೇ-ಆರ್ಡರ್‌ಗಳ ಕಾಲಮಿತಯನ್ನೂ 3 ತಿಂಗಳಿಗೆ ತಗ್ಗಿಸಲಾಗಿದೆ. ಚೆಕ್, ಡಿ.ಡಿಗಳ  ಮೇಲೆ ನಮೂದಿಸಿದ ದಿನಾಂಕದಿಂದ 90 ದಿನಗಳವರೆಗೆ ಮಾತ್ರ ಊರ್ಜಿತ ಹೊಂದಿರುತ್ತದೆ ಎಂದು `ಆರ್‌ಬಿಐ~ ಪ್ರಕಟಣೆ ತಿಳಿಸಿದೆ. ಆರು ತಿಂಗಳ ಕಾಲಮಿತಿಯ ದುರುಪಯೋಗ ಪಡೆದು ಅನೇಕರು ಚೆಕ್‌ಗಳ ಮೂಲಕ ವಂಚನೆ ಎಸಗುತ್ತಿದ್ದರು. ಬ್ಯಾಂಕುಗಳು ಮತ್ತು ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಕಾಲಮಿತಿ ತಗ್ಗಿಸುವುದು ಅನಿವಾರ್ಯವಾಗಿತ್ತು ಎಂದು `ಆರ್‌ಬಿಐ~ ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.