ಬುಧವಾರ, ಜನವರಿ 29, 2020
23 °C

ಚೆಕ್‌ಪೋಸ್ಟ್ ಕಣ್ಗಾವಲಿಗೆ ಅತ್ಯಾಧುನಿಕ ವಾಹನ!

ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಲೋಕಸಭೆ ಚುನಾವಣೆ ಸಮೀಪಿಸು ತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ತ್ವರಿತ ವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಣ್ಗಾವಲು ವಾಹನ ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಗುಲ್ಬರ್ಗದಲ್ಲಿ ಈ ವಾಹನವನ್ನು ಪ್ರಾಯೋಗಿಕವಾಗಿ ಬಳಸ ಲಾಗುತ್ತಿದೆ. ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಕಣ್ಗಾವಲು ವಾಹನ ಬಳಸುವ ಬಗ್ಗೆ ಚಿಂತನೆ ನಡೆದಿದೆ.ಈ ವಾಹನದ (Vehicle Surveillance Check Post) ಮೇಲ್ಭಾಗದಲ್ಲಿ ಎರಡು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವು 360 ಡಿಗ್ರಿಯಲ್ಲಿ ದೃಶ್ಯಗಳನ್ನು ಸೆರೆಹಿಡಿ ಯುತ್ತವೆ. ಅಲ್ಲದೇ, ವಾಹನದ ನಾಲ್ಕೂ ಬದಿಗೆ ನಾಲ್ಕು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಜನರೇಟರ್, ಏರ್ ಕಾಂಪ್ರೆಸರ್, ಕಂಪ್ಯೂಟರ್, ಧ್ವನಿವರ್ಧಕ, ಮೈಕ್, ಎಲ್‌ಸಿಡಿ ಪರದೆಯನ್ನು ಅಳವಡಿಸಲಾಗಿದ್ದು, ಇವುಗಳನ್ನು ನಿಯಂತ್ರಿಸುವ ವ್ಯಕ್ತಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.ಗುಲ್ಬರ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ಸರಗಳ್ಳತನ, ಮನೆ ಕಳವು, ಸಿಮೆಂಟ್ ಲಾರಿ ದರೋಡೆಯಂತಹ ಪ್ರಕರಣಗಳು ಮರುಕಳಿಸು ತ್ತಲೇ ಇವೆ. ಇವುಗಳ ಮೇಲೆ ನಿಗಾ ಇಡಲು ಕಣ್ಗಾವಲು ವಾಹನ ಸಹಾಯಕವಾಗಲಿದೆ. ಎಲ್ಲ ದೃಶ್ಯಗಳ ವಿಡಿಯೋ ಮಾಡಿಕೊಳ್ಳುವುದರಿಂದ ಆರೋಪಿಗಳು ಪರಾರಿಯಾದರೂ ದೃಶ್ಯಾವಳಿ ಸಹಾಯದಿಂದ ಅವರ ಪತ್ತೆ ಹಚ್ಚಬಹುದಾಗಿದೆ.‘ಅಪರಾಧ ಪ್ರಕರಣ ತಡೆಗಟ್ಟಲು ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟು ಕೊಂಡು ಈ ವಾಹನ ಬಳಸಲಾಗುತ್ತಿದೆ. ಇದಕ್ಕೆ ₨ 5 ಲಕ್ಷ ವೆಚ್ಚ ತಗುಲಿದೆ. ಜೇವರ್ಗಿ ಮತ್ತು ಆಳಂದ ಚೆಕ್‌ಪೋಸ್ಟ್‌ಗಳಲ್ಲಿ ಎರಡು ವಾಹನಗಳನ್ನು ಬಳಸಲಾಗುತ್ತದೆ. ಚೆಕ್‌ಪೋಸ್ಟ್‌ ನಲ್ಲಿ ಸಂಚರಿಸುವ ಎಲ್ಲ ವಾಹನಗಳ ನಂಬರ್ ಪ್ಲೇಟ್ ಹಾಗೂ ವಾಹನದ ಒಳಗೆ ಇರುವ ವ್ಯಕ್ತಿಗಳ ಚಲನವಚಲಗಳನ್ನು 360 ಡಿಗ್ರಿಯಲ್ಲಿ ಈ ವಾಹನದ ಮೇಲ್ಭಾಗದಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾ ಸೆರೆಹಿಡಿಯುತ್ತದೆ. ಇದರಿಂದ ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾ ಗಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‘ಸುರಕ್ಷಿತ ನಗರ ಯೋಜನೆಯಡಿ (Safe City Project) ಈ ವಾಹನವನ್ನು ಪ್ರಾಯೋಗಿ ಕವಾಗಿ ಬಳಸಲಾಗುತ್ತಿದೆ. ಅಕ್ರಮ ಚಟುವಟಿಕೆ, ಸರಗಳವು ಪತ್ತೆಗೆ ಇದು ನೆರವಾಗಲಿದೆ. ಅಲ್ಲದೇ, ಗಣ್ಯರು, ಅತಿ ಗಣ್ಯರು ಬಂದಾಗ, ಬೃಹತ್ ಸಮಾವೇಶಗಳನ್ನು ಆಯೋಜಿಸಿದಾಗ ಹದ್ದಿನ ಕಣ್ಣು ಇಡಲು ಇದು ನೆರವಾಗಲಿದೆ. ಈ ವಾಹನದಲ್ಲಿ ಮೈಕ್, ಸ್ಪೀಕರ್ ಮತ್ತು ಸೈರನ್ ಇರುವುದರಿಂದ ಸಂಚಾರ ದಟ್ಟಣೆ ನಿಯಂತ್ರಿಸಲೂ ಸಹಾಯಕವಾಗಲಿದೆ’ ಎಂದು ಮೂಲಗಳು ಹೇಳುತ್ತವೆ.‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್ ಸಿಂಗ್‌ ಹಾಗೂ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅವರ ದೂರದೃಷ್ಟಿಯಿಂದ ಈ ವಾಹನ ವನ್ನು ತಯಾರಿಸಲಾಗಿದೆ. ಒಂದು ತಿಂಗಳಿನಿಂದ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಶೀಘ್ರವೇ ಇಲಾಖೆಗೆ ಹಸ್ತಾಂತರಿಸಲಾಗುವುದು’ ಎಂದು ವಾಹನ ಸಿದ್ಧಪಡಿಸಿರುವ ಮಾಸ್ಟರ್ ಹೈ–ಟೆಕ್ ಸಿಸ್ಟೆಮ್ಸ್ ಕಂಪೆನಿಯ ಮಾಲೀಕ ಇಕ್ಬಾಲ್ ಎ.ಸಿದ್ದಿಕಿ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)