ಚೆಕ್ ನಗದೀಕರಣಕ್ಕೆ ಏಕರೂಪ ಶುಲ್ಕ ನಿಗದಿ: ಆರ್‌ಬಿಐ ಸೂಚನೆ

7

ಚೆಕ್ ನಗದೀಕರಣಕ್ಕೆ ಏಕರೂಪ ಶುಲ್ಕ ನಿಗದಿ: ಆರ್‌ಬಿಐ ಸೂಚನೆ

Published:
Updated:

ಮುಂಬೈ (ಪಿಟಿಐ): ಒಂದು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್ ನಗದೀಕರಣಕ್ಕೆ ಏಕರೂಪದ ಶುಲ್ಕ ನಿಗದಿಪಡಿಸುವಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚನೆ ನೀಡಿದೆ.ಸ್ಥಳೀಯ ಮತ್ತು ಪರಸ್ಥಳದ ತೀರುವಳಿಗೆ ಇನ್ನು ಮುಂದೆ ಏಕರೂಪದ ಶುಲ್ಕ ನಿಗದಿಪಡಿಸಬೇಕು. ಬ್ಯಾಂಕುಗಳು ಮನಸ್ಸು ಬಂದಂತೆ ಶುಲ್ಕ ವಿಧಿಸಬಾರದು. ಪರಿಷ್ಕೃತ ಶುಲ್ಕವನ್ನು ಕೂಡಲೇ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು `ಆರ್‌ಬಿಐ~ ಪ್ರಕಟಣೆ ತಿಳಿಸಿದೆ.ಈ ಮೊದಲು ಚೆಕ್‌ನ ಒಟ್ಟು ಮೌಲ್ಯ ಆಧರಿಸಿ ಬ್ಯಾಂಕುಗಳು ಶೇಕಡಾವಾರು ಶುಲ್ಕ ಸಂಗ್ರಹಿಸುತ್ತಿದ್ದವು.

ಗ್ರಾಮೀಣ ಪ್ರದೇಶದ ಬ್ಯಾಂಕುಗಳು ಆಯಾ ದಿನವೇ ಚೆಕ್ ವಿಲೇವಾರಿ ಮಾಡುವಂತಹ ವ್ಯವಸ್ಥೆ ಅಳವಡಿಸಿಕೊಳ್ಳುವಂತೆಯೂ, ಈಗಿರುವ ಚೆಕ್ ಸಂಗ್ರಹ  ನೀತಿಯನ್ನು ಪರಿಷ್ಕರಿಸುವಂತೆಯೂ `ಆರ್‌ಬಿಐ~ ಸೂಚಿಸಿದೆ.ಒಂದು ವೇಳೆ ಬ್ಯಾಂಕುಗಳು ಚೆಕ್ ಸಂಗ್ರಹದ ಮೇಲೆ ಅನಿರ್ಬಂಧಿತ ಶುಲ್ಕ ವಿಧಿಸಿದರೆ ಅದು `2007ರ ಪಾವತಿ ಮತ್ತು ಇತ್ಯರ್ಥ ನೀತಿ~ಯ ಉಲ್ಲಂಘನೆ ಎಂದು `ಆರ್‌ಬಿಐ~ ಎಚ್ಚರಿಸಿದೆ.ಚೆಕ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಬ್ಯಾಂಕುಗಳು ತಮ್ಮದೇ ಆದ ಸ್ವಂತ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದೂ ಆರ್‌ಬಿಐ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry