ಬುಧವಾರ, ಡಿಸೆಂಬರ್ 11, 2019
19 °C

ಚೆನ್ನಾಗಿ ತಿನ್ನಿ: ಕರೀನಾ

Published:
Updated:
ಚೆನ್ನಾಗಿ ತಿನ್ನಿ: ಕರೀನಾ

ನಾನು ಯಾವತ್ತೂ ಉಪವಾಸವಿರಲಿಲ್ಲ. ಹಸಿವಿನಿಂದ ಕೊರಗಲಿಲ್ಲ. ತಶ್ನ್ ಸಿನಿಮಾಗಾಗಿ ಸೈಜ್ ಜೀರೊ ಇದ್ದಾಗಲೂ ಚೆನ್ನಾಗಿ ತಿಂತಾ ಇದ್ದೆ. ಹೀಗೆನ್ನುವ ಕರೀನಾ ಕಪೂರ್ ಯುವತಿಯರಿಗೆ ತಮ್ಮ ಸಪೂರ ದೇಹದ ದೇಖರೇಖಿಯ ಕುರಿತು ಹೇಳಿಕೊಂಡಿದ್ದಾರೆ.

`ಚೆನ್ನಾಗಿ ತಿನ್ನಿ. ಉಪವಾಸದಿಂದ ದೇಹ ಕೃಶವಾಗುತ್ತದೆಯೇ ಹೊರತು ಸೌಂದರ್ಯ ಉಳಿಸಿಕೊಳ್ಳುವುದಿಲ್ಲ. ಪಂಜಾಬಿ ಯುವತಿಯಾಗಿ ನಾನು ತಿಂಡಿಪೋತಿ ಎಂದೇ ಹೇಳಬಲ್ಲೆ. ಪ್ರತಿದಿನವೂ ನಾನು ಪರಾಠಾಗಳನ್ನು ಸೇವಿಸುತ್ತೇನೆ. ಆಲೂ, ಗೋಬಿ ಮುಂತಾದ ಪರಾಠಾಗಳು ನನ್ನಿಷ್ಟದ ತಿಂಡಿ. ತಿನ್ನುವುದು ಮುಖ್ಯವಲ್ಲ. ಸರಿಯಾದ ಸಮಯದಲ್ಲಿ ತಿನ್ನುವುದು, ನಂತರದ ದೇಹದಂಡನೆ ಮುಖ್ಯ. ಸದ್ಯಕ್ಕೆ ಸೈಜ್ ಜೀರೊ ಲೊಲೊಗೆ ಸಲ್ಲಬೇಕು. ಅವಳೀಗ ಸಪೂರ ಸುಂದರಿ~ ಎಂದು ತಮ್ಮ ಸಹೋದರಿ ಕರಿಶ್ಮಾಳನ್ನು ಹೊಗಳುತ್ತಾರೆ.

ಪ್ರತಿಕ್ರಿಯಿಸಿ (+)