ಚೆನ್ನೈನಲ್ಲಿ ಸ್ನೇಹಿತರು

7

ಚೆನ್ನೈನಲ್ಲಿ ಸ್ನೇಹಿತರು

Published:
Updated:

ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ `ಸ್ನೇಹಿತರು~ ಚಿತ್ರದ  ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಚೆನ್ನೈ ಬಂದರಿನಲ್ಲಿ ನಡೆದಿದೆ. ಸಾಹಸ ನಿರ್ದೇಶಕ ಪಳನಿರಾಜ್ ಅವರ ಸಾರಥ್ಯದಲ್ಲಿ ಒಂದು ಸಾಹಸ ಸನ್ನಿವೇಶ ಹಾಗೂ ಹಲವು ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ.ಐದು ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ವಿಜಯ ರಾಘವೇಂದ್ರ, ತರುಣ್‌ಚಂದ್ರ, ಸೃಜನ್‌ಲೋಕೇಶ್, ರವಿಶಂಕರ್, ಪ್ರಣೀತಾ, ಬುಲೆಟ್‌ಪ್ರಕಾಶ್, ರಮೇಶ್‌ಭಟ್, ಟೆನ್ನಿಸ್‌ಕೃಷ್ಣ, ಶೋಭರಾಜ್, ಗಿರಿಜಾಲೋಕೇಶ್ ಮುಂತಾದವರು ಭಾಗವಹಿಸಿದ್ದರು.ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿರುವ ಈ ಚಿತ್ರಕ್ಕೆ ಐದು ಹಾಡುಗಳ ಚಿತ್ರೀಕರಣ ನಡೆಯಬೇಕಿದೆ. ನಿರ್ದೇಶನ ರಾಮ್‌ನಾರಾಯಣ್ ಅವರದ್ದು. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry