ಶುಕ್ರವಾರ, ಫೆಬ್ರವರಿ 26, 2021
20 °C
ಅಂತರರಾಜ್ಯ ಬ್ಯಾಸ್ಕೆಟ್‌ ಬಾಲ್‌ ಟೂರ್ನಿ

ಚೆನ್ನೈ ಜೆಪ್ಪಿಯಾರ್‌ ತಂಡ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ ಜೆಪ್ಪಿಯಾರ್‌ ತಂಡ ಪ್ರಥಮ

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ದಕ್ಷಿಣ ಭಾರತ ಅಂತರರಾಜ್ಯ ಬ್ಯಾಸ್ಕೆಟ್‌ ಬಾಲ್ ಪಂದ್ಯಾವಳಿಯಲ್ಲಿ ಚೆನ್ನೈ ಜೆಪ್ಪಿಯಾರ್ ತಾಂತ್ರಿಕ ಮಹಾವಿದ್ಯಾಲಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.ಚಿಕ್ಕಮಗಳೂರು ಬ್ಯಾಸ್ಕೆಟ್‌ ಬಾಲ್‌ ಕ್ಲಬ್‌, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಜಯಕುಮಾರ್ ಸ್ಮರಣಾರ್ಥ ನಡೆದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಆಂಧ್ರಪ್ರದೇಶದ ಸಿಕಂದರ ಬಾದ್ ಸೌತ್ ಸೆಂಟ್ರಲ್ ರೈಲ್ವೆತಂಡವನ್ನು  71–59 ಅಂಕಗಳಿಂದ ಪರಾಭವಗೊಳಿಸಿದ ಚೆನ್ನೈ ತಂಡ  ಛಾಂಪಿಯನ್ ಆಗಿ ಹೊರಹೊಮ್ಮಿತು.ಆಕ್ರಮಣಕಾರಿಯಾಗಿ ಆಟ ಪ್ರದರ್ಶಿಸಿದ ಚೆನ್ನೈ ತಂಡದ ಆಟಗಾರ ಅರುಣ್ ಕುಮಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಚಿನ್ನದ ಕೈ ಆಟಗಾರ ಎಂಬ ಖ್ಯಾತಿ ಪಡೆದರು.ಆಂಧ್ರಪ್ರದೇಶ ತಂಡದ ಆಕ್ರಮಣಕಾರಿಆಟಗಾರ ಮುರುಳಿ ಪಂಜಾಬ್ ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದು,  ಇವರ ಅನುಪಸ್ಥಿತಿಯನ್ನು ಸಮರ್ಥವಾಗಿ ಬಳಿಸಕೊಂಡ ಚೆನ್ನೈ ತಂಡ ಆಟಗಾರರು  ಉತ್ತಮ ಹೊಂದಾಣಿಕೆ ಮತ್ತು ಆಕ್ರಮಕಾರಿ ಆಟದ ಮೂಲಕ ಎದುರಾಳಿ ತಂಡದ ಎಲ್ಲಾ ತಂತ್ರಗಳನ್ನು ವಿಫಲಗೊಳಿಸಿದರು.ಭಾನುವಾರ ಬೆಳಿಗ್ಗೆ ನಡೆದ ಸಮಿಫೈನಲ್ ಪಂದ್ಯದಲ್ಲಿ ಆಂಧ್ರ ತಂಡ ಬೆಂಗಳೂರಿನ ಸುರಾನಾಕಾಲೇಜು್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಎರಡನೆಯ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ತಂಡದವರು ಅದೇ ರಾಜ್ಯದ ಸತ್ಯಭಾಮಾ ವಿಶ್ವವಿದ್ಯಾಲಯ ತಂಡವನ್ನು ಪಾರಭವಗೊಳಿಸಿ ಅಂತಿಮ ಪಂದ್ಯ ಪ್ರವೇಶಿಸಿದರು.ಮೂರನೆಯ ಸ್ಥಾನಕ್ಕೆ ನಡೆದ  ಪಂದ್ಯದಲ್ಲಿ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾನಿಲಯ  ಮತ್ತು ಬೆಂಗಳೂರು ಸುರಾನಾ ತಂಡಗಳ ನಡುವೆ ನಡೆದ ಆಟ ರೋಚಕವಾಗಿತ್ತು. ಈ ಎರಡು ತಂಡಗಳು ಸಮಬಲ ಸಾಧಿಸುತ್ತಿದ್ದವು. ಚೆನ್ನೈತಂಡ ಸುರಾನಾ ತಂಡವನ್ನು 52–39 ಅಂಕದೊಂದಿಗೆ ಸೋಲಿಸಿ ಮೂರನೆ ಸ್ಥಾನ ಪಡೆಯಿತು.ಪಂದ್ಯಾವಳಿಯಲ್ಲಿ ಆಕ್ರಮಣಕಾರಿ ಆಟ ವಾಡಿದ ಚಾಂಪಿಯನ್ ತಂಡದಅರುಣ್ ಕುಮಾರ್‌ ಪಂದ್ಯಪುರು­ಷೋತ್ತಮ ಪ್ರಶಸ್ತಿ ಹಾಗೂ 1ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಪ್ರಥಮಸ್ಥಾನ ಪಡೆದ ತಂಡಕ್ಕೆ 25ಸಾವಿರ ರೂಪಾಯಿ ನಗದು ಬಹುಮಾನ ಟ್ರೋಫಿ, ದ್ವಿತೀಯ ಸ್ಥಾನಕ್ಕೆ 15ಸಾವಿರ ರೂಪಾಯಿ ನಗದು ಟ್ರೋಫಿ,ತೃತೀಯ ಸ್ಥಾನ ಪಡೆದ ತಂಡಕ್ಕೆ 6ಸಾವಿರ ರೂಪಾಯಿ ನಗದು ಮತ್ತು ಪಾರಿತೋಷಕ, ನಾಲ್ಕನೆಯ ಸ್ಥಾನ ಪಡೆದ ತಂಡಕ್ಕೆ 4ಸಾವಿರರೂಪಾಯಿ ನಗದು ಬಹುಮಾನವನ್ನು  ಚಿಕ್ಕಮಗಳೂರುಬ್ಯಾಸ್ಕೆಟ್‌ ಬಾಲ್ ಕ್ಲಬ್ ಅಧ್ಯಕ್ಷ ಪೆಪ್ಪಿಜಾಕೋಬ್, ಜಿಲ್ಲಾಕಾಂಗೆ್ರಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ವಿತರಿಸಿದರು.ಎದುರಾಳಿ ತಂಡದ ಆಟಕ್ಕೆ ತಕ್ಕಂತೆ ರಕ್ಷಣಾತ್ಮಕವಾಗಿ ಆಟ ಪ್ರದರ್ಶಿಸುವಲ್ಲಿ  ವಿಫಲರಾಗುವುದರೊಂದಿಗೆ ಸಿಕ್ಕ ಅವಕಾಶಗಳನ್ನು ಅಂಕಗಳಾಗಿ ಪರಿವರ್ತಿಸುವಲ್ಲಿ ತಂಡ ವಿಫಲವಾಗಿದ್ದು ಸೋಲಿಗೆ ಕಾರಣ ಎಂದು ರೈಲ್ವೆ ತಂಡದ ತರಬೇತುದಾರ ಹಾಗೂ ಮಾಜಿ ರಾಷ್ಟ್ರೀಯ ಬ್ಯಾಸ್ಕೆಟ್‌ ಬಾಲ್ ಆಟಗಾರರೂ ಆದ  ವಿಶಾಲ್ ಕುಮಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.