ಭಾನುವಾರ, ಮೇ 16, 2021
22 °C

ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡ  ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು 13 ರನ್‌ಗಳ ಗೆಲುವು ಪಡೆಯಿತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164 ರನ್ ಪೇರಿಸಿತು. ಪುಣೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಮಾತ್ರ ಗಳಿಸಿತು. ಇದಕ್ಕೆ ಚೆನ್ನೈ ತಂಡದ ಬಿಗುವಿನ ಬೌಲಿಂಗ್ ಕಾರಣವಾಯಿತು. ನುವಾನ್ ಕುಲಶೇಖರ (10ಕ್ಕೆ2) ಹಾಗೂ ಡ್ವೇನ್ ಬ್ರಾವೊ (28ಕ್ಕೆ2) ಸಮರ್ಥ ಬೌಲಿಂಗ್ ನಡೆಸಿದರು.ಆರಂಭಿಕ  ಬ್ಯಾಟ್ಸ್‌ಮನ್‌ಗಳಾದ ಫಾಫ್ ಡು ಪ್ಲೆಸಿಸ್ (58, 48 ಎ, 4 ಬೌಂ, 2 ಸಿಕ್ಸರ್) ಮತ್ತು ಸುಬ್ರಮಣ್ಯಂ ಬದರೀನಾಥ್ (57, 48 ಎ, 8 ಬೌಂ) ಗಳಿಸಿದ ಅರ್ಧಶತಕದಿಂದ ಚೆನೈ ತಂಡ 150 ರನ್‌ಗಳ ಗಡಿಯನ್ನು ದಾಟಿತು.ಟಾಸ್ ಸೋತರೂ ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ತಂಡಕ್ಕೆ ಪ್ಲೆಸಿಸ್ ಮತ್ತು ಬದರೀನಾಥ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 15.3 ಓವರ್‌ಗಳಲ್ಲಿ 116 ರನ್ ಸೇರಿಸಿದರು. ಕಳೆದ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮುರಳಿ ವಿಜಯ್ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿಲ್ಲ.

ಈ ಕಾರಣ ಪ್ಲೆಸಿಸ್ ಜೊತೆ ಬದರೀನಾಥ್ ಇನಿಂಗ್ಸ್ ಆರಂಭಿಸಿದರು. ತಂಡದ ಈ ಯೋಜನೆ ಯಶ ಕಂಡಿತು.

ಸ್ಕೋರ್ ವಿವರ

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 164ಫಾಫ್ ಡು ಪ್ಲೆಸಿಸ್ ಸಿ ಮ್ಯಾಥ್ಯೂಸ್ ಬಿ ಮರ್ಲಾನ್ ಸ್ಯಾಮುಯೆಲ್ಸ್  58ಸುಬ್ರಮಣ್ಯಂ ಬದರೀನಾಥ್ ಸಿ ಮ್ಯಾಥ್ಯೂಸ್ ಬಿ ಮರ್ಲಾನ್ ಸ್ಯಾಮುಯೆಲ್ಸ್  57ಸುರೇಶ್ ರೈನಾ ಸಿ ಕಾರ್ತಿಕ್ ಬಿ ಆಶೀಶ್ ನೆಹ್ರಾ  00ಮಹೇಂದ್ರ ಸಿಂಗ್ ದೋನಿ ಔಟಾಗದೆ  28ಡ್ವೇನ್ ಬ್ರಾವೊ ಸಿ ಮ್ಯಾಥ್ಯೂಸ್ ಬಿ ಆಶೀಶ್ ನೆಹ್ರಾ  12ರವೀಂದ್ರ ಜಡೇಜ ಸಿ ಶರ್ಮಾ ಬಿ ಮರ್ಲಾನ್            ಸ್ಯಾಮುಯೆಲ್ಸ್  07ಇತರೆ: (ಲೆಗ್‌ಬೈ-1, ನೋಬಾಲ್-1)  02ವಿಕೆಟ್ ಪತನ: 1-116 (ಪ್ಲೆಸಿಸ್; 15.3), 2-116 (ಬದರೀನಾಥ್; 15.5), 3-119 (ರೈನಾ; 16.3), 4-142 (ಬ್ರಾವೊ; 18.5), 5-164 (ಜಡೇಜ; 19.6)ಬೌಲಿಂಗ್: ಮುರಳಿ ಕಾರ್ತಿಕ್ 4-0-24-0, ಆಶೀಶ್ ನೆಹ್ರಾ 4-0-23-2, ಭುವನೇಶ್ವರ್ ಕುಮಾರ್ 3-0-37-0, ಮರ್ಲಾನ್ ಸ್ಯಾಮುಯೆಲ್ಸ್ 4-0-39-3, ರಾಹುಲ್ ಶರ್ಮಾ 4-0-28-0, ಏಂಜೆಲೊ ಮ್ಯಾಥ್ಯೂಸ್ 1-0-12-0ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151ರಾಬಿನ್ ಉತ್ತಪ್ಪ ಸಿ ಆರ್. ಅಶ್ವಿನ್ ಬಿ ಕುಲಶೇಖರ  08ಜೆಸ್ಸಿ ರೈಡರ್ ಸಿ ಬ್ರಾವೊ ಬಿ ಕುಲಶೇಖರ  09ಸೌರವ್ ಗಂಗೂಲಿ ಸಿ ಕುಲಶೇಖರ ಬಿ ಶದಬ್ ಜಕಾತಿ  24ಮನೀಷ್ ಪಾಂಡೆ ಸಿ ಬದರೀನಾಥ್ ಬಿ ಬ್ರಾವೊ  13ಮರ್ಲಾನ್ ಸ್ಯಾಮುಯೆಲ್ಸ್ ಸಿ ಕುಲಶೇಖರ ಬಿ ಆರ್. ಅಶ್ವಿನ್    26ಸ್ಟೀವನ್ ಸ್ಮಿತ್ ಸಿ ಡು ಪ್ಲೆಸಿಸ್ ಬಿ ಬೊಲಿಂಜರ್  23ಏಂಜೆಲೊ ಮ್ಯಾಥ್ಯೂಸ್ ಬಿ ಬ್ರಾವೊ 27ಭುವನೇಶ್ವರ ಕುಮಾರ್ ಔಟಾಗದೆ  02ಮುರಳಿ ಕಾರ್ತಿಕ್ ಔಟಾಗದೆ  04ಇತರೆ: (ಬೈ-1, ಲೆಗ್ ಬೈ-6, ವೈಡ್-7, ನೋ ಬಾಲ್-1) 15ವಿಕೆಟ್ ಪತನ: 1-13 (ಉತ್ತಪ್ಪ; 1.2), 2-26 (ರೈಡರ್; 3.4), 3-53 (ಪಾಂಡೆ; 6.1), 4-64 (ಗಂಗೂಲಿ; 9.4), 5-97 (ಸ್ಯಾಮಯೆಲ್ಸ್; 13.2), 6-141 (ಸ್ಮಿತ್; 18.2), 7-144 (ಮ್ಯಾಥೂಸ್; 19.1).ಬೌಲಿಂಗ್: ಡಗ್ ಬೌಲಿಂಜರ್ 3-030-1, ನುವಾನ್ ಕುಲಶೇಖರ 2-0-10-2, ಆರ್. ಅಶ್ವಿನ್ 4-0-35-1, ಡ್ವೇನ್ ಬ್ರಾವೊ 4-0-28-2, ಸದಬ್ ಜಕಾತಿ 3-0-20-1, ರವೀಂದ್ರ ಜಡೇಜ 4-0-21-0.ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 13 ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ನುವಾನ್ ಕುಲಶೇಖರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.