ಭಾನುವಾರ, ಮೇ 9, 2021
28 °C

ಚೆಲುವಿನ ಚಿತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಯ ಹೇಗಿರಬೇಕು ಅಂತ ಯಾರಾದರೂ ಕೇಳಿದರೆ ಒಮ್ಮೆಲೆ ಉತ್ತರಿಸುವುದು ಕಷ್ಟ. ಪದ್ಯ ಪದ್ಯದ ಹಾಗಿರಬೇಕು... ಪದ್ಯವೇ ಆಗಿರಬೇಕು ಅಷ್ಟೆ! ಚಂದವಿರುವುದು ಹೇಗಿರಬೇಕು? ಚಂದವಾಗಿರಬೇಕು! ಹಾಗೆಯೇ ಕಲೆ? ಕಲೆಯಾಗಿರಬೇಕು! ಕಲೆಯ ಪ್ರಕಾರ ಯಾವುದಾದರೂ ಇರಬಹುದು. ಆದರೆ, ಅದು ಬೇಡುವುದು ಚೆಂದವನ್ನಷ್ಟೆ.ಹೊರನಾಡ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯ್‌ರಾಜ್ ಬೋಧನ್‌ಕರ್, ಸಂಗೀತಾ ಗಾದಾ ಹಾಗೂ ಕಿಶೋರ್ ನಡವಡೇಕರ್ ಅವರ ಚಿತ್ರ ಕಲಾಕೃತಿಗಳಲ್ಲಿ ಚೆಲುವು ಮೇಳೈಸಿದೆ. ಸಂಗೀತಾ ಅವರದು ಹೆಚ್ಚಾಗಿ ಅಮೂರ್ತ ಕಲಾಕೃತಿಗಳು. ವಿವಿಧ ವರ್ಣಗಳಲ್ಲಿ ಮೈದಳೆದಿವೆ.ಕಿಶೋರ್ ಅವರ ಕಲಾಕೃತಿಗಳಲ್ಲಿ ಪ್ರಕೃತಿ ತನ್ನ ಸಹಜತೆಯೊಂದಿಗೆ ಮೈದಳೆದಿದೆ. ಕೊಳದ ಒಳಗೆ  ಅರಳಿರುವ ಕಮಲದ ಹೂಗಳು ನೋಡುಗರ ಮೈಮನ ಪುಳಕಿತ ಗೊಳಿಸುವಂತಿವೆ. ಜಲವರ್ಣದಲ್ಲಿರುವ ಇವರ ಕಲಾಕೃತಿ ಅಪಾರ ಪ್ರೇಕ್ಷಕರ ಮನ ಕದ್ದಿವೆ. ಹಾಗೆಯೇ ವಿಜಯ್‌ರಾಜ್ ಮತ್ತು ಕೈಲಾಸ್ ಅವರ ಕಲಾಕೃತಿಗಳು ಗಮನ ಸೆಳೆಯುತ್ತವೆ.ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ. ಬೆಳಿಗ್ಗೆ 10.30 ರಿಂದ ಸಂಜೆ 7.30. ಪ್ರದರ್ಶನ ಸೆ.15ಕ್ಕೆ ಮುಕ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.