ಗುರುವಾರ , ನವೆಂಬರ್ 14, 2019
19 °C

ಚೆಲುವಿನ ಚಿತ್ತಾರ

Published:
Updated:
ಚೆಲುವಿನ ಚಿತ್ತಾರ

ಕೆಂಪು ಟೊಪ್ಪಿ, ತಿಳಿಗುಲಾಬಿ ಬಣ್ಣದ ಸ್ಕರ್ಟ್ ಧರಿಸಿದ್ದ ರೂಪದರ್ಶಿಯೊಬ್ಬರು ಕೈಯಲ್ಲೊಂದು ಪುಟಾಣಿ ಬುಟ್ಟಿ ಹಿಡಿದುಕೊಂಡು ವಯ್ಯಾರದಿಂದ ಬಳುಕುತ್ತಾ, ದೇಹವನ್ನು ಬಾಗಿಸುತ್ತಾ ರ‌್ಯಾಂಪ್‌ಮೇಲೆ ನಿಂತಾಗ ಫ್ಯಾಷನ್‌ಪ್ರಿಯರೆಲ್ಲಾ ಆಕೆಯ ಅಂದಚೆಂದವನ್ನು ಬೆರಗಿನಿಂದ ಕಣ್ತುಂಬಿಕೊಂಡರು.

ಮತ್ತೊಬ್ಬ ರೂಪದರ್ಶಿಯ ವಸ್ತ್ರಕ್ಕೆ ಹೂವೇ ಸ್ಫೂರ್ತಿ ತುಂಬಿತ್ತು. ಆಕೆಯ ವಕ್ಷಸ್ಥಳವನ್ನು ಹೂವಿನ ಪಕಳೆಯಂತೆ ಕಾಣಿಸುತ್ತಿದ್ದ ಮೆತ್ತನೆಯ ಉಲ್ಲನ್‌ನ ಕುಸುರಿ ವಿನ್ಯಾಸ ಆವರಿಸಿಕೊಂಡಿತ್ತು. ಸೆಕೆ ಬೀಸಿಕೊಳ್ಳಲು ಬಳಸುವ ಬೀಸಣಿಗೆಯನ್ನು ನೆನಪಿಸುವಂಥ ವಿಚಿತ್ರ ವಸ್ತ್ರವನ್ನು ಧರಿಸಿದ್ದ ರೂಪದರ್ಶಿಯೊಬ್ಬರ ವಸ್ತ್ರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೀಸಣಿಗೆಗಳಿದ್ದವು.

ಬಿಳಿ ಗೌನ್ ತೊಟ್ಟುಕೊಂಡಿದ್ದ ಬೆಡಗಿಯ ಮುಡಿಯಲ್ಲಿ ಬಿಳಿ ಬಣ್ಣದ ಹೂಗಳು ನಗುತ್ತಿದ್ದವು. ವೋಗ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳು ಈಚೆಗೆ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಫ್ಯಾಷನ್ ಶೋನಲ್ಲಿ ಕಂಡುಬಂದ ದೃಶ್ಯಗಳಿವು.

ಪ್ರತಿಕ್ರಿಯಿಸಿ (+)