ಗುರುವಾರ , ಏಪ್ರಿಲ್ 15, 2021
27 °C

ಚೆಲ್ಲಾಪಿಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ಕೊಂಡರೆ ಇನ್ನೊಂದು ಉಚಿತ

ಲಂಡನ್ ಮೂಲದ ಪೆಪೆ ಜೀನ್ಸ್ ಬ್ರಾಂಡ್ ಪ್ರತಿ ಬಾರಿಯಂತೆ ಈ ಬಾರಿಯೂ ತನ್ನ ಉಡುಗೆಗಳ ಮೇಲೆ ರಿಯಾಯಿತಿ ಘೋಷಿಸಿದೆ. `ಎರಡು ಕೊಂಡರೆ ಇನ್ನೊಂದು ಉಚಿತ~ವಾಗಿ ಕೊಡುತ್ತಿದೆ.ವಿವಿಧ ಕೌಶಲವುಳ್ಳ ಬೇಸಿಗೆ ಉಡುಪುಗಳು ಲಭ್ಯವಿದ್ದು, ಟೀ-ಶರ್ಟ್, ಶರ್ಟ್, ಡೆನೀಮ್ಸ, ಸ್ಕರ್ಟ್ಸ್, ವಿನೂತನ ಮಾದರಿಯ ಉಡುಪುಗಳು, ಬ್ಯಾಗ್, ಟೋಪಿ, ಬೆಲ್ಟ್, ಪರ್ಸ್ ಮೊದಲಾದವು ಇಲ್ಲಿ ಲಭ್ಯ.

ವಿದ್ಯುತ್ ಉಳಿತಾಯಕ್ಕೆ ನೂತನ ಎಲ್‌ಇಡಿ ಬಲ್ಬ್

ಸೋಲಾರ್ ವಾಟರ್ ಹೀಟರ್‌ತಯಾರಿಕೆಯಲ್ಲಿ ಮುಂದಿರುವ ಅನು ಸೋಲಾರ್ ಇದೀಗ ವಿದ್ಯುತ್ ಉಳಿತಾಯಕ್ಕೆಂದು ವಿನೂತನ ಎಲ್‌ಇಡಿ ಬಲ್ಬ್‌ಗಳನ್ನು ಪರಿಚಯಿಸಿದೆ.

ಈ ಎಲ್‌ಇಡಿ ಬಲ್ಬ್‌ಗಳು ಇನ್ನಿತರ  ಬಲ್ಬ್‌ಗಳಿಗಿಂತ ಹೆಚ್ಚು ವಿದ್ಯುತ್ ಉಳಿತಾಯಕ್ಕೆ ನೆರವಾಗುತ್ತದೆ.ಜತೆಗೆ ಪರಿಸರಕ್ಕೆ ಮಾರಕವಾಗುವಂತಹ ಅನಿಲಗಳ ಹೊರಸೂಸುವಿಕೆಯೂ ಇದರಲ್ಲಿ ಕಡಿಮೆ ಎಂದು ಕಂಪೆನಿ ಹೇಳಿಕೊಂಡಿದೆ.ಇನ್ನಿತರ ಎಲ್‌ಇಡಿ ಬಲ್ಬ್‌ಗಳಿಗಿಂತ ಇದರ ಬೆಲೆಯೂ ಕಡಿಮೆಯಿದ್ದು, ಹೆಚ್ಚು ಬೆಳಕಿನೊಂದಿಗೆ ಕಡಿಮೆ ಉಷ್ಣಾಂಶ ಹೊರಹಾಕುತ್ತದೆ. ಉನ್ನತ ಗುಣಮಟ್ಟ, ಕೈಗೆಟುಕುವ ದರ ಇದಾದ್ದರಿಂದ ಜನರಿಗೆ ವಿದ್ಯುತ್ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಇದರಿಂದ ರಾಜ್ಯ ವಿದ್ಯುತ್ ಘಟಕದ ಮೇಲೂ ಹೊರೆ  ಕಡಿಮೆಯಾಗುತ್ತದೆ ಎನ್ನುವುದು ಅನು ಸೋಲಾರ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಜೋಸೆಫ್ ಅವರ ಮಾತು.ಈ ಎಲ್‌ಇಡಿ ಬಲ್ಬ್‌ಗಳು ವಿವಿಧ ಶ್ರೇಣಿಯಲ್ಲಿ ಲಭ್ಯವಿದ್ದು, ಗೃಹೋಪಯೋಗಕ್ಕೆ 2 ವ್ಯಾಟ್‌ನಿಂದ 12 ವ್ಯಾಟ್‌ನವರೆಗೆ, ಹೊರಾಂಗಣಕ್ಕೆ 6 ರಿಂದ 200 ವ್ಯಾಟ್‌ನ ತನಕ ವ್ಯವಸ್ಥೆಗೆ ತಕ್ಕಂತೆ ಬಲ್ಬ್‌ಗಳನ್ನು ರೂಪಿಸಲಾಗಿದೆ. ಇವುಗಳ ಬೆಲೆ 400ರೂ.ನಿಂದ 600 ರೂ.ವಿಶೇಷ ವಾಚುಗಳು ಮಾರುಕಟ್ಟೆಗೆ

ಸಮಕಾಲೀನ ವಾಚುಗಳ ಬ್ರಾಂಡ್ ಆಗಿರುವ ರಾಮನ್ಸನ್ ಮಹಿಳೆ ಹಾಗೂ ಪುರುಷರಿಗಾಗಿ ವಿಶೇಷ ವಾಚುಗಳ ಸಂಗ್ರಹವನ್ನು ಬಿಡುಗಡೆಗೊಳಿಸಿದೆ.

ಅತ್ಯಾಕರ್ಷಕ ವಿನ್ಯಾಸ, ಶೈಲಿ, ವರ್ಣಗಳಲ್ಲಿ ಈ ವಾಚುಗಳು ಲಭ್ಯ.ಕ್ಲಾಸಿಕ್ ಶೈಲಿಯಲ್ಲಿ ಇವನ್ನು ತಯಾರಿಸಲಾಗಿದ್ದು ತರಚು ನಿರೋಧಕ  ಗ್ಲಾಸ್ ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ.ಅರಮನೆ ರಸ್ತೆಯ ಬಳಿ ಇರುವ ಎಲೆಗಾನ್ಸ್ ಗಿಫ್ಟ್ ಶಾಪ್‌ನಲ್ಲಿ ಈ ವಾಚ್‌ಗಳು ಲಭ್ಯ. ಮಾಹಿತಿಗೆ: 32516174.

ಮಮ್ಮಾಮಿಯಾದಲ್ಲಿ ಚಾಕಲೇಟ್‌ಸವಿ

ಮಮ್ಮಾಮಿಯಾದಲ್ಲಿ ಇದೀಗ ಚಾಕೋಲೆಟ್ ಸವಿಯ ಗೆಲಾತೊ ಪರಿಚಯಿಸಿದ್ದಾರೆ.

ಚಾಕೊಲೇಟ್‌ನ ಗರಿಗರಿಯೊಂದಿಗೆ ಮೆದುಮೃದುವಾದ ಕ್ರೀಂ ನಾಲಗೆಯ ರುಚಿಯನ್ನು ತಣಿಸುತ್ತದೆ ಎನ್ನುವುದು ಮಮ್ಮಾಮಿಯಾ ಭರವಸೆಯಾಗಿದೆ.59 ರೂಪಾಯಿಗೆ ಒಂದು ಸ್ಕೂಪ್ ನೀಡಲಾಗುತ್ತದೆ. 5 ಸ್ಕೂಪ್‌ನ ಬೆಲೆಗೆ 6 ಕೊಳ್ಳಬಹುದಾಗಿದೆ.ಕೋರಮಂಗಲ ಹಾಗಾ ಇಂದಿರಾನಗರದ ಮಳಿಗೆಗಳಲ್ಲಿ ಈ ಗೆಲಾತೊ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ: 080 41149423/ 9379416398

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.