ಚೆಲ್ಲಾಪಿಲ್ಲಿ

7

ಚೆಲ್ಲಾಪಿಲ್ಲಿ

Published:
Updated:

ಹೊಸ ಹ್ಯಾಂಡ್‌ವಾಷ್

ಮೆಡಿಮಿಕ್ಸ್ ಸೋಪ್ ತಯಾರಿಸುವ ಎವಿಎ ಚೋಲಾಯಿಲ್ ಪ್ರಾಡೆಕ್ಟ್ಸ್ ಮತ್ತು ಸರ್ವಿಸಸ್ ಈಗ ಎರಡು ಬಗೆಯ ನೂತನ ಹ್ಯಾಂಡ್‌ವಾಷ್‌ಗಳನ್ನು ಬಿಡುಗಡೆ ಮಾಡಿದೆ.

ಮೆಡಿಮಿಕ್ಸ್ ಹರ್ಬಲ್ ಹ್ಯಾಂಡ್‌ವಾಷ್ ಮತ್ತು ಮೆಡಿಮಿಕ್ಸ್ ಸ್ಯಾಂಡಲ್ ಹ್ಯಾಂಡ್‌ವಾಷ್ 18 ಗಿಡಮೂಲಿಕೆಗಳ ಸಮ್ಮಿಶ್ರಣ ಹೊಂದಿದ್ದು, ಕೀಟಾಣುಗಳ ವಿರುದ್ಧ ಹೋರಾಡಿ ಕೈಗಳಿಗೆ ಸುರಕ್ಷೆ ಹಾಗೂ ಮೃದುತ್ವ ನೀಡುತ್ತದೆ. ಈ ಹ್ಯಾಂಡ್‌ವಾಷ್‌ಗಳು ಆರೋಗ್ಯಕ್ಕೆ ಹಾನಿತರುವ ಟ್ರೈಕ್ಲೋಸನ್ ಮತ್ತು ರಾಸಾಯನಿಕಗಳಿಂದ ಮುಕ್ತವಾಗಿದೆ.

ಪಂಜಾಬಿ ಚಿಕನ್ ಟಿಕ್ಕಾ

ಗಾಡ್ರೇಜ್ ಟೈಸನ್ ರುಚಿಕರ ಹಾಗೂ ಸ್ವಾದಿಷ್ಟಕರ ಪಂಜಾಬಿ ಚಿಕನ್ ಟಿಕ್ಕಾ ಬಿಡುಗಡೆ ಮಾಡಿದೆ.ಅಪ್ಪಟ ಪಂಜಾಬಿ ಮಸಾಲೆಯಿಂದ ಸಿದ್ಧಪಡಿಸಲಾಗಿರುವ ಈ ಚಿಕನ್ ಟಿಕ್ಕಾ ಮನೆ ಹಾಗೂ ಪಾರ್ಟಿಗಳಲ್ಲಿ ಚಿಕನ್ ಖಾದ್ಯ ತಯಾರಿಸಲು ಹೇಳಿಮಾಡಿಸಿದಂತಿದೆ. ಅತ್ಯಂತ ರುಚಿಕಟ್ಟಾದ ಹಾಗೂ ರಸಭರಿತ ಚಿಕನ್ ಸವಿಯಲು ಪಂಜಾಬಿ ಟಿಕ್ಕಾಗಿಂತ ಬೇರೊಂದಿಲ್ಲ.400 ಗ್ರಾಂನ ಬೆಲೆ 225 ರೂ. ರಿಯಲ್ ಗುಡ್ ಯಮೀಜ್ ಪಂಜಾಬಿ ಚಿಕನ್ ಟಿಕ್ಕಾ ನವೆಂಬರ್‌ನಿಂದ ಎಲ್ಲಾ ಮಳಿಗೆಗಳಲ್ಲಿ

ಲಭ್ಯವಿರುತ್ತದೆ.  

ಕುಕರ್ ಕೇಕ್ ಮಿಕ್ಸರ್

ಜನರಲ್ ಮಿಲ್ಸ್ ಕಂಪೆನಿಯು ಪಿಲ್ಸ್‌ಬರಿ ಡೆಸರ್ಟ್ ಮಿಕ್ಸ್ ಬ್ರಾಂಡ್‌ನ ನೂತನ `ಪಿಲ್ಸ್‌ಬರಿ ಕುಕರ್ ಕೇಕ್ ಮಿಕ್ಸ್~ ಪ್ಯಾಕೆಟ್ ಬಿಡುಗಡೆ ಮಾಡಿದೆ.ಹಗುರ, ಮೃದುವಾದ ಸ್ವಾದಿಷ್ಟ ಕೇಕ್ ಮಿಕ್ಸ್ ಇದಾಗಿದೆ. ಕೇಕ್ ಮಿಕ್ಸ್‌ಗೆ ಎಣ್ಣೆ ಮತ್ತು ಹಾಲನ್ನು ಬೆರೆಸಿ, ಚೆನ್ನಾಗಿ ಕಲಕಿ 30ರಿಂದ 35 ನಿಮಿಷ ಬೇಯಿಸಬೇಕು. ಆಗ ರುಚಿಕರ ಕೇಕ್ ಸಿದ್ಧವಾಗುತ್ತದೆ. ಒಮ್ಮೆ ತಯಾರಿಸಿದ ಕೇಕ್ ವಾರಗಟ್ಟಲೆ ಇಟ್ಟುಕೊಳ್ಳಬಹುದು ಎನ್ನುತ್ತದೆ ಕಂಪೆನಿ.ಚಾಕೊಲೇಟ್ ಮತ್ತು ವೆನಿಲಾ ಸ್ವಾದದಲ್ಲಿ ಇದು ಲಭ್ಯ. ಮಿಕ್ಸ್‌ನ 175 ಗ್ರಾಂ ಪ್ಯಾಕ್‌ಗೆ 65 ರೂಪಾಯಿ. ನಗರದ ಮೆಟ್ರೊ ಮಳಿಗೆಗಳಲ್ಲಿ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry