ಶನಿವಾರ, ಮೇ 8, 2021
26 °C

ಚೆಲ್ಲಾಪಿಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಿಕ್ ಪವರ್ ಬ್ರಷ್ ಮಾರುಕಟ್ಟೆಗೆ

ಹಲ್ಲಿನ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಚಿಂತಿತರಾಗುತ್ತಾರೆ. ಇದಕ್ಕಾಗಿ `ತ್ರಿಷಾ~, ಸೋನಿಕ್ ಪವರ್ ಬ್ರಷ್‌ನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು ಉಳಿದ ಬ್ರಷ್‌ಗಳಿಗಿಂತ ಭಿನ್ನವಾಗಿದೆ. ಸೋನಿಕ್ ಟೂತ್ ಬ್ರಷ್‌ನಲ್ಲಿ ಹಲವಾರು ಅನುಕೂಲಗಳಿವೆ.ಇದು ನೆಕ್‌ನಲ್ಲಿ ಸೂಕ್ಷ್ಮ ಮೋಟಾರ್ ಹೊಂದಿದ್ದು, ಪ್ರತಿ ನಿಮಿಷಕ್ಕೆ ಕೇವಲ 140 ಅಸಿಲೇಷನ್‌ಗೆ ಕಾರಣವಾಗುತ್ತದೆ ಮತ್ತು ಹಲ್ಲುಗಳ ಸಂಪೂರ್ಣ ಸ್ವಚ್ಛತೆಗೆ ಇದು ಸಹಾಯ ಮಾಡುತ್ತದೆ. ಇದು ವಯಸ್ಕರಿಗೆ ಮತ್ತು ಕಿರಿಯರಿಗೆ ಸೂಕ್ತವಾದ ಎರಡು ಭಿನ್ನ ಗಾತ್ರಗಳಲ್ಲಿ ಬರುತ್ತದೆ. ಬೆಲೆ ರೂ. 1195.ಪೇವರ್ಸ್ ಫುಟ್‌ವೇರ್

ಈ ಬಾರಿ ಬೇಸಿಗೆಗೆಂದೇ ಪೇವರ್ಸ್ ಇಂಗ್ಲೆಂಡ್ ವಿಶೇಷ ರೀತಿಯ ಫುಟ್‌ವೇರ್‌ಗಳನ್ನು ಪರಿಚಯಿಸಿದೆ.

ಬೇಸಿಗೆಯನ್ನು ಸಂಭ್ರಮದಿಂದ ಅನುಭವಿಸಿ ಎಂದು ಗ್ರಾಹಕರಿಗೆಂದು ವಿವಿಧ ವಿನ್ಯಾಸ ಮತ್ತು ಬಣ್ಣಗಳಲ್ಲಿ ಪೇವರ್ಸ್ ಹಲವು ಬಗೆಯ ಪಾದರಕ್ಷೆಗಳನ್ನು ಹೊರತಂದಿದೆ.ಮಹಿಳೆಯರಿಗೆಂದು ವೆಡ್ಜೆಸ್, ಸ್ಲೈಡ್ಸ್, ಫ್ಲಾಟ್ಸ್, ಬ್ಯಾಲೆರಿನಾಸ್ ಮತ್ತು ಪ್ಲಾಟ್‌ಫಾರ್ಮ್ ಹೀಲ್ಸ್, ಫ್ಲೋರಲ್ ಪ್ರಿಂಟ್ ಇರುವ ಪಾದರಕ್ಷೆಗಳನ್ನು ಹಾಗೂ ಪುರುಷರಿಗೆಂದು ಮೊಕಾಸಿನ್, ಬ್ರೋಗ್ಸ್, ಡೆಕ್ ಶೂ ಮತ್ತು ವಿಶೇಷ ಬಗೆಯ ಸ್ಯಾಂಡಲ್‌ಗಳನ್ನು ಮಾರಾಟಕ್ಕಿಟ್ಟಿದೆ.ಮಹಿಳೆಯರಿಗೆ 1199ರಿಂದ 3999 ರೂವರೆಗೆ ಹಾಗೂ ಪುರುಷರಿಗೆ 1799ರಿಂದ 7999ರವರೆಗಿನ ಬೆಲೆಯಲ್ಲಿ ಲಭ್ಯ. ಲೈಫ್‌ಸ್ಟೈಲ್, ಸೆಂಟ್ರಲ್ ಮತ್ತು ಶಾಪರ್ಸ್‌ ಸ್ಟಾಪ್ ಔಟ್‌ಲೆಟ್‌ಗಳಲ್ಲಿ ಪೇವರ್ಸ್‌ನ ಫುಟ್‌ವೇರ್‌ಗಳು ಸಿಗುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.