ಶನಿವಾರ, ಏಪ್ರಿಲ್ 17, 2021
23 °C

ಚೆಲ್ಲಾಪಿಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೊಸೊ ಬ್ರುನೆಲೊ ಪಾದರಕ್ಷೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟ್ರೆಂಡಿ ಪಾದರಕ್ಷೆಗಳಿಗೆ ಹೆಸರಾದ ರೊಸೊ ಬ್ರುನೆಲೊ ದೀಪಾವಳಿಗೆಂದೇ ಹೊಸ ವಿನ್ಯಾಸಗಳನ್ನು ಬಿಡುಗಡೆ ಮಾಡಿದೆ.

ಮೆಟಾಲಿಕ್ ಪೀಪ್ ಟೋಸ್, ಪಂಪ್ಸ್, ಸ್ಟಿಲೆಟೊ ಮತ್ತಿತರ ವಿನ್ಯಾಸಗಳು ಮಹಿಳೆಯರಿಗೆ ಮೀಸಲಾಗಿದ್ದು, ಹಗುರವೂ, ಆಕರ್ಷಕ ಬಣ್ಣದಿಂದಲೂ ಕೂಡಿ ಗ್ಲಾಮರಸ್ ಆಗಿದೆ ಎಂದು ಕಂಪೆನಿ ಹೇಳಿದೆ. ಪುರುಷರಿಗೂ ಆಕರ್ಷಕ ಶ್ರೇಣಿಗಳು ಈ ಸಂಗ್ರಹದಲ್ಲಿವೆ. ಆರಂಭಿಕ ಬೆಲೆ 4199. ಈ ಸಂಗ್ರಹ ದ ಮಿಲಾನೊ ಮಳಿಗೆಗಳಲ್ಲಿ ಮಾತ್ರ ಲಭ್ಯ.ವಿವೇಕ್ಸ್‌ನಿಂದ ಮನೆ ಕೊಡುಗೆ

`ವಿವೇಕ್ಸ್~ ಮಳಿಗೆ ದೀಪಾವಳಿಗಾಗಿ ಪ್ರಕಟಿಸಿದ್ದ `ಸ್ಲೋಗನ್ ಬರೆದು 25 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್ ಗೆಲ್ಲಿ~ ಕೊಡುಗೆ, ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಿದೆ.

ಪ್ರವೇಶ ಅರ್ಜಿ ಮೂಲಕ ಗ್ರಾಹಕರಿಗೆ ವಿವೇಕ್ಸ್ ಮಳಿಗೆಗಳಲ್ಲಿ ಶ್ಲೋಗನ್ ಆಧರಿತ ಪ್ರಶ್ನೆಯನ್ನು ನೀಡಲಾಗುತ್ತದೆ. ಬಂಪರ್ ಬಹುಮಾನದ ವಿಜೇತರನ್ನು ತೀರ್ಪುಗಾರರ ಸಮಿತಿ ನಿರ್ಧರಿಸಲಿದೆ. ಪ್ರತಿ 2000 ರೂ. ಮತ್ತು ಹೆಚ್ಚಿನ ಮೌಲ್ಯದ ಖರೀದಿಗೆ ಡಿಶ್ ಟಿವಿ ಡಿಟಿಎಚ್ ಸಂಪರ್ಕ, ಬಜಾಜ್ ಫಿನ್‌ಸರ್ವ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಯಾವುದೇ ಖರೀದಿ ಮಾಡುವವರಿಗೆ ಶೇ. 1ರಿಂದ ಶೇ. 500ರವರೆಗಿನ ಕ್ಯಾಶ್ ಬ್ಯಾಕ್ ಕೊಡುಗೆ ಹಾಗೂ ಆಯ್ದ ಉತ್ಪನ್ನಗಳ ಮೇಲೆ 24 ಗಂಟೆಗಳ ಮರುಪಾವತಿ ಆಯ್ಕೆಯೂ ಸೇರಿದಂತೆ ಹತ್ತಾರು ನಮೂನೆಯ ಕೊಡುಗೆಗಳು ಇವೆ.ಪ್ರೊಲೈನ್ ಸಂಗ್ರಹ

ಪ್ರೊಲೈನ್ ಉಡುಪು ಬ್ರಾಂಡ್ ಚಳಿಗಾಲಕ್ಕಾಗಿ `ಪ್ರೊಲೈನ್ ವಾರ್ಸಿಟಿ~ ಸಂಗ್ರಹ ಬಿಡುಗಡೆ ಮಾಡಿದೆ.ವಿವಿಧ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಇವು ಲಭ್ಯವಿದ್ದು, ಕ್ರೀಡಾಪಟುಗಳಿಗೆ ಮಾತ್ರವಲ್ಲದೇ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲಿವೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಚಿತ್ರಗಳು ಹಾಗೂ ಲೋಗೊ ಇರುವ ಟಿ-ಶರ್ಟ್‌ಗಳು ಗಮನ ಸೆಳೆಯಲಿವೆ.ಕ್ರೀಡಾಪಟುಗಳಿಗಾಗಿ ರೂ. 999ರಿಂದ 1799ರ ಬೆಲೆಯಲ್ಲಿ `ದಿ ಸ್ವೆಟ್ ಶರ್ಟ್~, `ದಿ ಕಾರ್ಡಿಯನ್~, `ದಿ ರಗ್ ಬಿ ಟಿ~ ಹಾಗೂ `ದಿ ಹೂಡಿ~ ಸಂಗ್ರಹಗಳಿವೆ. ಸೆಂಟ್ರಲ್, ಶಾಪರ್ಸ್ ಸ್ಟಾಪ್, ಲೈಫ್‌ಸ್ಟೈಲ್ ಮತ್ತು ರಿಲಾಯನ್ಸ್ ಟ್ರೆಂಡ್ ಮಳಿಗೆಗಳಲ್ಲಿ ಈ ಸಂಗ್ರಹ ಲಭ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.