ಭಾನುವಾರ, ಜೂನ್ 13, 2021
24 °C

ಚೆಸ್‌: ಮತ್ತೆ ಡ್ರಾ ಸಾಧಿಸಿದ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಂಟಿ ಮನ್‌ಸಿಸ್ಕ್‌, ರಷ್ಯಾ (ಪಿಟಿಐ):  ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ ರಷ್ಯಾದ ಡಿಮಿಟ್ರಿ ಆ್ಯಂಡ್ರೆಕಿನ್‌ ಜೊತೆ ಪಾಯಿಂಟ್‌ ಹಂಚಿ ಕೊಂಡರು. ಇದರೊಂದಿಗೆ ಒಟ್ಟು ಪಾಯಿಂಟ್‌ ಅನ್ನು 3.5ಕ್ಕೆ ಹೆಚ್ಚಿಸಿಕೊಂ ಡಿರುವ ಆನಂದ್‌   ಅಗ್ರಸ್ಥಾನ ದಲ್ಲಿದ್ದಾರೆ.‘ಐದನೇ ಸುತ್ತಿನಲ್ಲಿ ಗೆಲುವು ಸಾಧಿಸಲು ಸಾಕಷ್ಟು ಪ್ರಯತ್ನಪಟ್ಟರೂ  ಆಗಲಿಲ್ಲ. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿರುವುದು ಸಂತಸ ತಂದಿದೆ’ ಎಂದು ಪಂದ್ಯದ ಬಳಿಕ ಆನಂದ್‌ ಪ್ರತಿಕ್ರಿಯಿಸಿದ್ದಾರೆ.ಐದು ಸುತ್ತುಗಳಿಂದ ತಲಾ 3 ಪಾಯಿಂಟ್‌ ಹೊಂದಿರುವ ಸ್ವಿಡ್ಲರ್‌, ಕ್ರಾಮ್ನಿಕ್‌ ಹಾಗೂ ಅರೋನಿಯನ್‌  ಎರಡನೇ ಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.