ಚೆಸ್‌: ಸೇತುರಾಮನ್‌ಗೆ ಜಯ

7

ಚೆಸ್‌: ಸೇತುರಾಮನ್‌ಗೆ ಜಯ

Published:
Updated:

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಪಿ. ಸೇತುರಾಮನ್‌ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಏಳನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ದುಡಾ ಜಾನ್‌ ಕ್ರೈಜ್‌ಟಾಫ್‌ ವಿರುದ್ಧ ಗೆಲುವು ಪಡೆದರು.ಸೇತುರಾಮನ್‌ ಇದೀಗ ಒಟ್ಟು 5.5 ಪಾಯಿಂಟ್‌ಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸಹಜ್‌ ಗ್ರೋವರ್‌, ಪೆರುವಿನ ಜಾರ್ಜಿ ಕೋರಿ ಹಾಗೂ ಇರಾನ್‌ನ ಇದಾನಿ ಪೌಯಾ ಇಷ್ಟೇ ಪಾಯಿಂಟ್‌ ಹೊಂದಿದ್ದಾರೆ.6.5 ಪಾಯಿಂಟ್‌ ಹೊಂದಿರುವ ಚೀನಾದ ಯು ಯಾಂಗಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry