ಭಾನುವಾರ, ಏಪ್ರಿಲ್ 18, 2021
26 °C

ಚೆಸ್: ಅಗ್ರಸ್ಥಾನಕ್ಕೇರಿದ ಎಂ.ಕುನಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ತಮಿಳುನಾಡಿನ ಆಟಗಾರರು, ಎರಡನೇ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯ ಮೂರನೇ ದಿನವಾದ ಶುಕ್ರವಾರ ಮೊದಲ    ಹತ್ತರೊಳಗೆ ಹೆಚ್ಚಿನ ಸ್ಥಾನಗಳಿಗೆ ಲಗ್ಗೆ ಹಾಕಿ ಗಮನ ಸೆಳೆದರು. ಇವರಲ್ಲಿ ಒಬ್ಬರಾದ ಎಂ.ಕುನಾಲ್ ಐದನೇ ಸುತ್ತಿನ ನಂತರ ಗರಿಷ್ಠ ಐದು ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನಕ್ಕೇರಿದರು.ಕೊಡಿಯಾಲ್‌ಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ತಿರುಚ್ಚಿಯ ಕುನಾಲ್ ಕುತೂಹಲಕರ `ಎಂಡ್‌ಗೇಮ್~ ಕಂಡ ಪಂದ್ಯದಲ್ಲಿ ತನ್ನದೇ ರಾಜ್ಯದ ಪ್ರತಿಭಾನ್ವಿತ ಕಾರ್ತಿಕೇಯನ್ (4) ಮುರಳಿ ವಿರುದ್ಧ 70 ನಡೆಗಳಲ್ಲಿ ಗೆಲುವನ್ನು ಸಾಧಿಸಿದರು. ಕಾರ್ತಿಕೇಯನ್, ಕಳೆದ ವರ್ಷ ಬ್ರೆಜಿಲ್‌ನಲ್ಲಿ ನಡೆದ ವಿಶ್ವ 12 ವರ್ಷದೊಳಗಿನವರ ಚಾಂಪಿಯನ್ ಕಿರೀಟ ಧರಿಸಿ ಗಮನಸೆಳೆದಿದ್ದರು.ಕರ್ನಾಟಕ ಎಂ.ಜಿ.ಗಹನ್ ಸೇರಿದಂತೆ ಆರು ಆಟಗಾರರು ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿ ಕುನಾಲ್ ಅವರ ಬೆನ್ನಟ್ಟಿದ್ದಾರೆ. ರಾಮ್ ಎಸ್.ಕೃಷ್ಣನ್ (ಬಿಎಸ್‌ಎನ್‌ಎಲ್), ಬಿ.ಶೇಖರ್, ಆರ್.ಎ.ಪ್ರದೀಪ್ ಕುಮಾರ್, ಫಿಡೆ ಮಾಸ್ಟರ್ ವಿನೋದ್ ಕುಮಾರ್ (ಎಲ್ಲರೂ ತಮಿಳುನಾಡು), ಸದರ್ನ್ ರೈಲ್ವೇಸ್‌ನ ಐಎಂ ಡಿ.ಪಿ.ಸಿಂಗ್ ಉಳಿದ ಐವರು.ಐದನೇ ಸುತ್ತಿನ ಎರಡನೇ ಬೋರ್ಡ್‌ನಲ್ಲಿ ಬಿಎಸ್‌ಎನ್‌ಎಲ್‌ನ ರಾಮ್ ಎಸ್.ಕೃಷ್ಣನ್, ಚೆನ್ನೈನ ಬ್ಲೂಮ್ ಚೆಸ್ ಅಕಾಡೆಮಿಯ ಬಿ.ಶೇಖರ್ ಜತೆ `ಶಾಂತಿ ಒಪ್ಪಂದ~ಕ್ಕೆ ಅಂಕಿತ ಹಾಕಿದರು. ಕಪ್ಪು ಪಡೆಗಳಲ್ಲಿ ಆಡಿದ ಸ್ಥಳೀಯ ಆಟಗಾರ ಗಹನ್, ಚೆನ್ನೈನ ಎನ್.ಸುರೇಂದ್ರನ್ (4) ವಿರುದ್ಧ ಗೆಲುವನ್ನು ದಾಖಲಿಸಿದರು. ಗಹನ್ ನಾಲ್ಕನೇ ಸುತ್ತಿನಲ್ಲಿ ಆನಂದ್‌ರಾಜ್ ವಿರುದ್ಧ `ಡ್ರಾ~ ಮಾಡಿಕೊಂಡಿದ್ದರು.ಇಂಟರ್‌ನ್ಯಾಷನಲ್ ಮಾಸ್ಟರ್ ಡಿ.ಪಿ.ಸಿಂಗ್, ಚೆನ್ನೈನ ಎನ್.ಲೋಕೇಶ್ (3.5) ವಿರುದ್ಧ, ಪ್ರದೀಪ್ ಕುಮಾರ್, ಎಸ್.ಸಿ.ಸುಬ್ರಹ್ಮಣ್ಯಂ (ಸದರ್ನ್ ರೈಲ್ವೆ, 3.5) ವಿರುದ್ಧ ಜಯಗಳಿಸಿದರು. ಚೆನ್ನೈನ ಆನಂದರಾಜ್ (4), ಸದರ್ನ್ ರೈಲ್ವೇಸ್‌ನ ಮಾರಿ ಅರುಳ್ (4) ಜತೆ ಡ್ರಾ ಮಾಡಿಕೊಂಡರೆ, ವಿನೋದ್ ಕುಮಾರ್, ಬೆಂಗಳೂರಿನ ವಿನಾಯಕ ಕುಲಕರ್ಣಿ (3.5) ಜಯಗಳಿಸಿದರು.ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದ ಅಗ್ರ ಶ್ರೇಯಾಂಕದ ಐಎಂ ಟಿ.ಎಸ್.ರವಿ (4), ಕೇರಳದ ಅರ್ಜುನ್ (3) ವಿರುದ್ಧ ಗೆಲುವನ್ನು ಸಂಪಾದಿಸಿದರು. ಮಣಿಪುರದ ಡಾಂಗ್ಮೆ ಬಾಸ್ಕೊ (3), ಕೇರಳದ ಒ.ಟಿ.ಅನಿಲ್ ಕುಮಾರ್ (4)ಗೆ ಶರಣಾದರು. ಬೆಂಗಳೂರಿನ ಎ.ಬಾಲಕಿಶನ್ ಮತ್ತು ಮೈಸೂರಿನ ವೈ.ಜಿ.ವಿಜೇಂದ್ರ ತಲಾ ನಾಲ್ಕು ಅಂಕ ಗಳಿಸಿದ್ದಾರೆ. ಐದು ದಿನಗಳ ಈ ಟೂರ್ನಿ ಎರಡು ಲಕ್ಷ ರೂಪಾಯಿ ಬಹುಮಾನ ಹೊಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.