ಚೆಸ್: ಆನಂದ್- ನಕಮುರ ಪಂದ್ಯ ಡ್ರಾ

7

ಚೆಸ್: ಆನಂದ್- ನಕಮುರ ಪಂದ್ಯ ಡ್ರಾ

Published:
Updated:

ಲಂಡನ್ (ಪಿಟಿಐ): ಪ್ರಶಸ್ತಿಯ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯ ಎಂಟನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಹಿಕರು ನಕಮುರ ಅವರೊಂದಿಗೆ ಡ್ರಾ ಸಾಧಿಸಿದರು.ಸಾಕಷ್ಟು ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಇಬ್ಬರೂ ಗೆಲುವು ಪಡೆಯುವ ಹಲವು ಅವಕಾಶಗಳನ್ನು ಕಳೆದುಕೊಂಡರು. ಇದೀಗ ಆನಂದ್ ಬಳಿ ಎಂಟು ಪಾಯಿಂಟ್‌ಗಳಿವೆ. ಟೂರ್ನಿಯಲ್ಲಿ ಒಂದು ಸುತ್ತಿನ ಪಂದ್ಯ ಮಾತ್ರ ಬಾಕಿಯುಳಿದಿದೆ.ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ 17 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಾಮ್ನಿಕ್ ಎಂಟನೇ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಗವೇನ್ ಜೋನ್ಸ್ ವಿರುದ್ಧ ಗೆಲುವು ಪಡೆದರು. ಅಂತಿಮ ಸುತ್ತಿನ ಪಂದ್ಯಗಳಲ್ಲಿ ಕಾರ್ಲ್‌ಸನ್ ಭಾರತದ ಆನಂದ್ ವಿರುದ್ಧವೂ, ಕ್ರಾಮ್ನಿಕ್ ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ ಎದುರೂ ಪೈಪೋಟಿ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry