ಚೆಸ್: ಆನಂದ್- ಪೋಲ್ಗರ್ ಪಂದ್ಯ ಡ್ರಾ

7

ಚೆಸ್: ಆನಂದ್- ಪೋಲ್ಗರ್ ಪಂದ್ಯ ಡ್ರಾ

Published:
Updated:

ಲಂಡನ್ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯ ಏಳನೇ ಸುತ್ತಿನ ಪಂದ್ಯದಲ್ಲಿ ಹಂಗೇರಿಯ ಜುಡಿತ್ ಪೋಲ್ಗರ್ ಅವರೊಂದಿಗೆ ಡ್ರಾ ಸಾಧಿಸಿದರು.ಕಳೆದ ಸುತ್ತಿನಲ್ಲಿ ಮೈಕಲ್  ಆ್ಯಡಮ್ಸ ಕೈಯಲ್ಲಿ ಸೋಲು ಅನುಭವಿಸಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ಗೆ ಈ ಫಲಿತಾಂಶ ತೃಪ್ತಿನೀಡಿದೆ. ಪೋಲ್ಗರ್ ಕೂಡಾ ಎಚ್ಚರಿಕೆಯ ಆಟವಾಡಿದರು. ಇದೀಗ ಆನಂದ್ ಏಳು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಬಹುತೇಕ ಅಸ್ತಮಿಸಿದೆ.ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಒಟ್ಟು 17 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಪ್ರಶಸ್ತಿಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry