ಮಂಗಳವಾರ, ಅಕ್ಟೋಬರ್ 15, 2019
26 °C

ಚೆಸ್: ಕೃಷ್ಣ ಉಡುಪ, ಕಿಶನ್‌ಗೆ ಜಯ

Published:
Updated:

ಬೆಂಗಳೂರು: ಕರ್ನಾಟಕದ ಕಿಶನ್ ಗಂಗೊಳ್ಳಿ ಮತ್ತು ಕೃಷ್ಣ ಉಡುಪ ಇಲ್ಲಿ ಆರಂಭವಾದ ಫಿಡೆ ರೇಟೆಡ್ ಅಂಧರ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ಪಡೆದಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕಿಶನ್ ದೆಹಲಿಯ ಲವ್ಲಿ ಕುಮಾರ್ ಗ್ರೋವರ್ ವಿರುದ್ಧ ಜಯ ಪಡೆದರೆ, ಕೃಷ್ಣ ಒಡಿಶಾದ ಮನೋಜ್ ಕುಮಾರ್ ಬರಿಕ್ ಅವರನ್ನು ಮಣಿಸಿದರು.ಆರೆ ಕರ್ನಾಟಕದ ಕೆ.ಎಸ್. ನಾಗರಾಜ್ ಮತ್ತು ಎಂ. ಪ್ರಭು ಸ್ವಾಮಿ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಮಹಾರಾಷ್ಟ್ರದ ಅಮಿತ್ ದೇಶಪಾಂಡೆ ಅವರು ನಾಗರಾಜ್ ವಿರುದ್ಧ ಜಯ ಪಡೆದು ಪೂರ್ಣ ಪಾಯಿಂಟ್ ಸಂಗ್ರಹಿಸಿದರು. ಪ್ರಭು ಕೇರಳದ ಇ.ಪಿ. ನೌಶಾದ್ ಎದುರು ಪರಾಭವಗೊಂಡರು.

Post Comments (+)