ಚೆಸ್: ಕೊನೆಗೂ ಗೆಲುವು ಪಡೆದ ವಿಶ್ವನಾಥನ್ ಆನಂದ್

7

ಚೆಸ್: ಕೊನೆಗೂ ಗೆಲುವು ಪಡೆದ ವಿಶ್ವನಾಥನ್ ಆನಂದ್

Published:
Updated:

ಲಂಡನ್ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದರು. ಶುಕ್ರವಾರ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಇಂಗ್ಲೆಂಡ್‌ನ ಗವೇನ್ ಜೋನ್ಸ್ ಅವರನ್ನು ಮಣಿಸಿದರು.



ಈ ಗೆಲುವಿನ ಮೂಲಕ ಆನಂದ್ ಒಟ್ಟು ಆರು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೇರಿದರು. ವಿಶ್ವಚಾಂಪಿಯನ್ ಆನಂದ್ ಈ ಮೊದಲ ಎಲ್ಲ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರು.

ಟೂರ್ನಿಯಲ್ಲಿ ಮತ್ತೊಂದು ಗೆಲುವು ಪಡೆದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಐದನೇ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ ವಿರುದ್ಧ ಜಯ ಪಡೆದ ಅವರ ಬಳಿ ಇದೀಗ ಒಟ್ಟು 13 ಪಾಯಿಂಟ್‌ಗಳಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry