ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿಶ್ವನಾಥನ್ ಆನಂದ್

7

ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿಶ್ವನಾಥನ್ ಆನಂದ್

Published:
Updated:

ವಿಂಕ್ ಆ್ಯನ್ ಜೀ, ಹಾಲೆಂಡ್ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ 73ನೇ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ‘ಎ’ ಗುಂಪಿನ ಪಂದ್ಯದ ಎಂಟು ಸುತ್ತುಗಳ ನಂತರವೂ ಜಂಟಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.ವಿಶ್ವ ಚಾಂಪಿಯನ್ ಆನಂದ್ ಹಾಗೂ ಹಿಕರು ನಕಮುರು ಜಂಟಿಯಾಗಿ ಒಟ್ಟು 5.5 ಪಾಯಿಂಟುಗಳೊಂದಿಗೆ ಸಮನಾಗಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ನಕಮುರ ಅವರು ಆಡಿರುವ ಎಂಟು ಸುತ್ತುಗಳಲ್ಲಿ ನಾಲ್ಕು ಗೆಲುವು, ಒಂದು ಸೋಲು ಹಾಗೂ ಮೂರು ಸುತ್ತುಗಳಲ್ಲಿ ಡ್ರಾ ಪಡೆದಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ ‘ಸೂರ್ಯಶೇಖರ್ ಗಂಗೂಲಿ ಆಡಿರುವ ಒಟ್ಟು ಎಂಟು ಸುತ್ತುಗಳಲ್ಲಿ ಎರಡು ಗೆಲುವು, ನಾಲ್ಕು ಸೋಲು ಹಾಗೂ ಎರಡು ಸುತ್ತುಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry