ಶುಕ್ರವಾರ, ಮೇ 14, 2021
22 °C

ಚೆಸ್: ಜಂಟಿ ನಾಲ್ಕನೇ ಸ್ಥಾನದಲ್ಲಿ ಸಹಜ್ ಗ್ರೋವರ್, ಗುಜರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ನಾ, ಬಲ್ಗೇರಿಯಾ (ಪಿಟಿಐ): ಭಾರತದ ಸಹಜ್ ಗ್ರೋವರ್ ಹಾಗೂ ವಿದಿತ್ ಗುಜರಾತಿ ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯೂರೊಪ್ ಗೋಲ್ಡನ್ ಸ್ಯಾಂಡ್ಸ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ 3.5 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.



ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಗ್ರೋವರ್, ಮಾಲ್ಡೊವಾದ ಡಮಿಟ್ರಿ ಸ್ವೆತುಷ್ಕಿನ್ ವಿರುದ್ಧ; ಗುಜರಾತಿ, ರಷ್ಯಾದ  ಡೇವಿಡ್ ಪರವ್ಯಾನ್ ವಿರುದ್ಧ ಡ್ರಾ ಮಾಡಿಕೊಂಡರು.



ಒಂಬತ್ತು ಸುತ್ತುಗಳ ಟೂರ್ನಿಯ ನಾಲ್ಕನೇ ಸುತ್ತಿನ ಅಂತ್ಯಕ್ಕೆ ಜೆಕ್ ಗಣರಾಜ್ಯದ ಹ್ರಾಸೆಕ್, ರುಮೇನಿಯದ ವ್ಲಾಡಿಸ್ಲಾವ್ ಹಾಗೂ ಇಸ್ರೇಲ್ ತಮಿರ್ ಅವರು ಜಂಟಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.



ಟೂರ್ನಿಯಲ್ಲಿ ಇನ್ನೂ ಐದು ಸುತ್ತುಗಳು ಬಾಕಿ   ಉಳಿದಿದ್ದು, ಗ್ರೋವರ್ ಹಾಗೂ ವಿದಿತ್ ಅಗ್ರ ಹತ್ತು ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ.



ರುಮೇನಿಯದ ಜಾರ್ಜ್‌ಸ್ಕು ಅವರನ್ನು ಮಣಿಸಿದ ಭಾರತದ ಅಭಿಜಿತ್ ಗುಪ್ತಾ ಮೂರು ಪಾಯಿಂಟ್‌ಗಳನ್ನು ಹೊಂದಿದ್ದಾರೆ.



ಭಾರತದ ಗ್ರ್ಯಾಂಡ್ ಮಾಸ್ಟರ್‌ಗಳಾದ ಸುಂದರ್, ವೆಂಕಟೇಶ್, ಜಿ.ಎನ್.ಗೋಪಾಲ್, ಸೇನ್‌ಗುಪ್ತಾ ಹಾಗೂ ಎಸ್ ಅರುಣ್ ಪ್ರಸಾದ್ ಸಹ ತಲಾ ಮೂರು ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.