ಚೆಸ್: ಜತಿನ್, ಯಶಸ್ಕರ್ ಮುನ್ನಡೆ

ಗುರುವಾರ , ಜೂಲೈ 18, 2019
26 °C

ಚೆಸ್: ಜತಿನ್, ಯಶಸ್ಕರ್ ಮುನ್ನಡೆ

Published:
Updated:

ಮೈಸೂರು: ಆತಿಥೇಯ ಮೈಸೂರಿನ ಎಸ್.ಎನ್. ಜತಿನ್, ಯಶಸ್ಕರ್ ಜೋಯಿಸ್ ಶುಕ್ರವಾರ ಕಾವೇರಿ ಶಾಲೆಯಲ್ಲಿ ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಆರಂಭವಾದ 15 ವರ್ಷದೊಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ತಲಾ 2 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರು.ಎರಡನೇ ಸುತ್ತಿನಲ್ಲಿ ಎಸ್.ಎನ್. ಜತಿನ್ ಪ್ರಾಚಿ ಭಾರತಿ ಅವರನ್ನು ಸೋಲಿಸಿದರು. ಕೆ.ಆರ್. ಯಶಸ್ಕರ್ ಜೋಯಿಸ್ ಅವರು ಶಶಾಂಕ್ ಎಸ್. ಮಯ್ಯ ವಿರುದ್ಧ ಗೆಲುವು ಸಾಧಿಸಿದರು. ಮಂಗಳೂರಿನ ಅರ್ಜುನ್ ಆದಪ್ಪ ಯುವಶಂಕರ್ ಬಾಲಸುಬ್ರಹ್ಮಣ್ಯಂ ವಿರುದ್ಧ; ಬೆಂಗಳೂರಿನ ಆರ್. ಪಾರ್ಥಸಾರಥಿ, ಚೈನತ್ಯ ಗಣೇಶ್ ವಿರುದ್ಧ; ಮಂಗಳೂರಿನ ವಿವೇಕರಾಜ್ ರಾಘವ ಶ್ರೀನಿವಾಸ ವಿರುದ್ಧ; ಬೆಂಗಳೂರಿನ ಓಜಸ್ ಕುಲಕರ್ಣಿ ಅವರು ಆಯುಷ್ ಎನ್. ಉಬಾಲೆ ವಿರುದ್ಧ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry