ಗುರುವಾರ , ನವೆಂಬರ್ 21, 2019
26 °C

ಚೆಸ್ ಟೂರ್ನಿ 27ರಿಂದ

Published:
Updated:

ಬೆಳಗಾವಿ: ಇಲ್ಲಿನ ಲೈನ್ಸ್ ಕ್ಲಬ್ ಆಫ್ ಮಿಡ್‌ಟೌನ್ ಹಾಗೂ ಜಿಲ್ಲಾ ಚದುರಂಗ ಸಂಘದ ವತಿಯಿಂದ ಇದೇ 27, 28 ರಂದು ಐ.ಎಂ.ಎ ಹಾಲ್‌ನಲ್ಲಿ ಮುಕ್ತ ಚೆಸ್ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಲೈನ್ಸ್ ಕ್ಲಬ್ ಆಫ್ ಮಿಡಟೌನ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ತಿಳಿಸಿದರು.ಭಾನುವಾರ ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸಂಘದ ವತಿಯಿಂದ ಸತತ 16 ವರ್ಷಗಳಿಂದ ಚೆಸ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಸುಮಾರು 100 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 6000 ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ರೂ. 4500 ಮತ್ತು, ಟ್ರೋಫಿ  ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 4000 ಹಾಗೂ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸುನೀಲ ಸಾವಂತ, ಖಜಾಂಚಿ ರುದ್ರಣ್ಣ ಚಂದರಗಿ, ಬಿ.ಬಿ. ಶೆಟ್ಟಿ, ಸುನಿಲ್ ಚೌಗುಲೆ, ಸುಹಾಸ ನಿಂಬಾಳಕರ, ಎಸ್.ಕೆ. ದೇಸಾಯಿ, ಆರ್.ವಿ. ದೇಶಪಾಂಡೆ, ಎಸ್.ಕೆ. ಮಂಜುನಾಥ, ಅಜೀತ್ ಧಾಮನೇಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)