ಬುಧವಾರ, ಜೂಲೈ 8, 2020
26 °C

ಚೆಸ್: ಡ್ರಾಕ್ಕೆ ತೃಪ್ತಿಪಟ್ಟ ವಿಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕ್ ಆನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ ಎರ್ವಿನ್ ಲಾ ಆಮಿ ಜೊತೆ ಡ್ರಾಕ್ಕೆ ತೃಪ್ತಿಪಟ್ಟುಕೊಂಡರು.ಟೂರ್ನಿಯಲ್ಲಿ ಸತತ ಎರಡನೇ ಡ್ರಾ ಪಡೆದ ‘ವಿಶಿ’ ಒಟ್ಟು ಎರಡು ಪಾಯಿಂಟ್ ಹೊಂದಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಲಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಚೀನಾದ ವಾಂಗ್ ಹಾವೊ ಅವರ ಸವಾಲನ್ನು ಎದುರಿಸಲಿರುವರು,‘ಎ’ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಹೊಮ್ಮಿತು. ಹಾಲೆಂಡ್‌ನ ಅನೀಶ್ ಗಿರಿ ಅವರು ವಿಶ್ವದ ಅಗ್ರ ರ್ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಆಘಾತ ನೀಡಿದರು. ನೇಪಾಳ ಮೂಲದ ಗಿರಿ ಕೇವಲ 22 ನಡೆಗಳಲ್ಲಿ ಗೆಲುವು ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.