ಮಂಗಳವಾರ, ನವೆಂಬರ್ 19, 2019
27 °C

ಚೆಸ್: ಡ್ರಾ ಪಂದ್ಯದಲ್ಲಿ ಆನಂದ್

Published:
Updated:

ಪ್ಯಾರಿಸ್ (ಪಿಟಿಐ): ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ನಾಲ್ಕನೇ ಸುತ್ತಿನ ಪಂದ್ಯವನ್ನೂ ಡ್ರಾ ಮಾಡಿಕೊಂಡರು.ಗುರುವಾರ ಫ್ರಾನ್ಸ್‌ನ ಮ್ಯಾಕ್ಸಿಮ್ ವಷೀರ್-ಲಗ್ರೀವ್ ವಿರುದ್ಧ ನಡೆದ ಪಂದ್ಯದಲ್ಲಿ ಆನಂದ್ ಸಮಬಲ ಸಾಧಿಸಲಷ್ಟೇ ಶಕ್ತರಾದರು. ಇನ್ನೂ ಐದು ಸುತ್ತುಗಳ ಪಂದ್ಯಗಳು ಬಾಕಿಯಿದ್ದು ಪ್ರಸ್ತುತ ಆನಂದ್, ರಷ್ಯಾದ ವಿತುಯಿಗೋವ್ ಜೊತೆ ಜಂಟಿಯಾಗಿ ಎಂಟನೇ ಸ್ಥಾನದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)