ಮಂಗಳವಾರ, ನವೆಂಬರ್ 12, 2019
25 °C

ಚೆಸ್: ಡ್ರಾ ಪಂದ್ಯದಲ್ಲಿ ವಿಶ್ವನಾಥನ್ ಆನಂದ್

Published:
Updated:
ಚೆಸ್: ಡ್ರಾ ಪಂದ್ಯದಲ್ಲಿ ವಿಶ್ವನಾಥನ್ ಆನಂದ್

ಪ್ಯಾರಿಸ್ (ಪಿಟಿಐ): ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ಎರಡನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ನಿಕಿತಾ ವಿತುಯಿಗೋವ್ ವಿರುದ್ಧ ಡ್ರಾ ಸಾಧಿಸಿದರು.ಮಂಗಳವಾರ ನಡೆದ ಪಂದ್ಯ 40 ನಡೆಗಳಲ್ಲಿ ಅಂತ್ಯವಾಯಿತು. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆನಂದ್, ಇಂಗ್ಲೆಂಡ್‌ನ ಮೈಕೆಲ್ ಆಡಮ್ಸ ವಿರುದ್ಧ ಸೋಲು ಕಂಡಿದ್ದರು.ಇದೇವೇಳೆ, ಆಡಮ್ಸ ತಮ್ಮ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ತಮ್ಮ ಎರಡನೇ ಪಂದ್ಯದಲ್ಲಿ ಅವರು ರಷ್ಯಾದ ಪೀಟರ್ ಸ್ವಿಡ್ಲರ್ ವಿರುದ್ಧ ಜಯ ಕಂಡರು.ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಮಾಕ್ಸಿಮ್ ವಷೀರ್ ಲಾಗ್ರೇವ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆಲುವು ಕಂಡರು. ಅಂತೆಯೇ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ ಅರ್ಮೇನಿಯಾದ ಲೆವೋನ್ ಅರೋನಿಯನ್ ಜಯ ದಾಖಲಿಸಿದರು.

ಫ್ರಾನ್ಸ್‌ನ ಲಾರೆಟ್ ಫ್ರೆಸ್ಸಿನೆಟ್ ಮತ್ತು ಇಸ್ರೇಲ್‌ನ ಬೋರಿಸ್ ಗೆಲ್‌ಫಾಂಡ್ ನಡುವಿನ ಪಂದ್ಯ ಡ್ರಾಗೊಂಡಿತು.

ಪ್ರತಿಕ್ರಿಯಿಸಿ (+)