ಚೆಸ್: ಪಾಯಿಂಟ್ ಹಂಚಿಕೊಂಡ ಆನಂದ್

7

ಚೆಸ್: ಪಾಯಿಂಟ್ ಹಂಚಿಕೊಂಡ ಆನಂದ್

Published:
Updated:

ಬಿಲ್ಬೊ, ಸ್ಪೇನ್ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಐದನೇ ಮಾಸ್ಟರ್ಸ್ ಫೈನಲ್ ಚೆಸ್ ಟೂರ್ನಿಯ ತಮ್ಮ ಆರನೇ ಪಂದ್ಯದಲ್ಲೂ ಡ್ರಾ ಸಾಧಿಸಿದ್ದಾರೆ.



ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ ಫ್ರಾನ್ಸಿಸ್ಕೊ ವಾಲೆಜಾ ಪೊನ್ಸ್ ಎದುರು ಪಾಯಿಂಟ್ ಹಂಚಿಕೊಂಡರು. ಈ ಟೂರ್ನಿಯಲ್ಲಿ ಇದು ಸತತ ಆರನೇ ಡ್ರಾ. ಗ್ರ್ಯಾಂಡ್‌ಮಾಸ್ಟರ್ ಆನಂದ್ ತಮ್ಮ ಮೊದಲ ಪಂದ್ಯದಲ್ಲೂ ಫ್ರಾನ್ಸಿಸ್ಕೊ ಎದುರು ಡ್ರಾ ಮಾಡಿಕೊಂಡಿದ್ದರು.



ಮೊದಲ ಐದು ಪಂದ್ಯಗಳು ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ನಡೆದಿದ್ದವು. ಈಗ ನಡೆಯುತ್ತಿರುವುದು ಎರಡನೇ ಹಂತ. ವಾರದ ಬಿಡುವಿನ ನಂತರ ಈ ಟೂರ್ನಿ ನಡೆಯುತ್ತಿದೆ. ಇನ್ನು ನಾಲ್ಕು ಪಂದ್ಯಗಳು ಬಾಕಿ ಉಳಿದಿದ್ದು, ಆನಂದ್ ಈಗ ಆರು ಪಾಯಿಂಟ್ ಹೊಂದಿದ್ದಾರೆ.



ಆರನೇ ಸುತ್ತಿನ ಅಂತ್ಯಕ್ಕೆ ಫಲಿತಾಂಶ: ಫ್ಯಾಬಿಾನೊ ಕರುವಾನಾ (ಇಟಲಿ; 11 ಪಾಯಿಂಟ್ಸ್), ಮೆಗ್ನಸ್ ಕಾರ್ಲ್‌ಸನ್ (ನಾರ್ವೆ; 9 ಪಾಯಿಂಟ್ಸ್), ಲೆವೋನ್ ಅರೋನಿಯನ್ (ಅರ್ಮೇನಿಯಾ; 8), ವಿಶ್ವನಾಥನ್ ಆನಂದ್ (ಭಾರತ; 6), ಫ್ರಾನ್ಸಿಸ್ಕೊ ವಾಲೆಜಾ ಪೊನ್ಸ್ (ಫ್ರಾನ್ಸ್; 4), ಸರ್ಜಿ ಕರ್ಜಾಕಿನ್ (ರಷ್ಯಾ; 4).

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry