ಮಂಗಳವಾರ, ಏಪ್ರಿಲ್ 20, 2021
24 °C

ಚೆಸ್: ಬಾಲಕಿಶನ್‌ಗೆ ಮಣಿದ ಟಿ.ಎಸ್.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೊದಲ ಪ್ರಮುಖ ಅನಿರೀಕ್ಷಿತ ಫಲಿತಾಂಶವೊಂದರಲ್ಲಿ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಎ.ಬಾಲಕಿಶನ್, ಇಂಟರ್‌ನ್ಯಾಷನಲ್ ಮಾಸ್ಟರ್ ಟಿ.ಎಸ್. ರವಿ (ಐಒಸಿ, ಚೆನ್ನೈ) ಅವರನ್ನು ಸೋಲಿಸಿದರು.

 

ನಗರದಲ್ಲಿ ಮಳೆ ಕಡಿಮೆಯಾಗಿ ಬಿಸಿಲೇರುತ್ತಿರುವಂತೆ ಎರಡನೇ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಗೂ ಕಾವು ಏರುತ್ತಿದ್ದು, ಗುರುವಾರ ಬೆಳಿಗ್ಗೆ ಮೂರನೇ ಸುತ್ತಿನಲ್ಲಿ ಇನ್ನಿಬ್ಬರು ಪ್ರಮುಖ ಆಟಗಾರರು ತಮಗಿಂತ ಕೆಳಕ್ರಮಾಂಕದ ಆಟಗಾರರಿಗೆ ತಲೆಬಾಗಬೇಕಾಯಿತು.ಕೊಡಿಯಾಲ್‌ಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ತಾಂಡಲಂ ಷಣ್ಮುಖಂ (ಟಿ.ಎಸ್) ರವಿ, ಸ್ಥಿರ ಪ್ರದರ್ಶನ ನೀಡುತ್ತಿರುವ ಬಾಲಕಿಶನ್ ವಿರುದ್ಧ 33ನೇ ನಡೆಯಲ್ಲಿ ಸೋಲೊಪ್ಪಿಕೊಂಡರು. ಮೂರನೇ ಸುತ್ತಿನ ನಂತರ 16 ಆಟಗಾರರು ಮುನ್ನಡೆ ಹಂಚಿಕೊಂಡಿದ್ದಾರೆ.ಮೂರನೇ ಬೋರ್ಡ್‌ನಲ್ಲಿ ಚೆನ್ನೈನ ಎಸ್.ಆನಂದರಾಜ್ (2048), ತನಗಿಂತ 300 ರೇಟಿಂಗ್ ಹೆಚ್ಚು ಹೊಂದಿರುವ ಪುಣೆಯ ಶಶಿಕಾಂತ್ ಕುತ್ವಾಲ್ (2) ವಿರುದ್ಧ ಗೆಲುವನ್ನು ಸಾಧಿಸಿದರೆ, ಕೇರಳದ ಕೆ.ಆರ್.ಮಧುಸೂದನ್  (2029) ಐದನೇ ಬೋರ್ಡ್‌ನಲ್ಲಿ 41 ನಡೆಗಳ ನಂತರ ಮಹಾರಾಷ್ಟ್ರದ ಸೋಹನ್ ಫಡ್ಕೆ (2295) ವಿರುದ್ಧ ಗೆಲುವು ಪೂರೈಸಿದರು.ಉಳಿದಂತೆ ಇತರ ಶ್ರೇಯಾಂಕ ಆಟಗಾರರು ಸತತ ಮೂರನೇ ಅಂಕ ಸಂಪಾದಿಸಿದರು. ಎರಡನೇ ಶ್ರೇಯಾಂಕದ ಕಾರ್ತಿಕೇಯನ್ ಮುರಳಿ, ಚೆನ್ನೈನ ಬ್ಲೂಮ್ ಚೆಸ್ ಅಕಾಡೆಮಿಯ ಸಹವರ್ತಿ ಕೆ.ಜಿ. ಚೈತನ್ಯ (2) ವಿರುದ್ಧ ಜಯಗಳಿಸಿದರು.

 

ಆರನೇ ಶ್ರೇಯಾಂಕದ ಐಎಂ ಆಟಗಾರ ಡಿ.ಪಿ.ಸಿಂಗ್ (ಸದರ್ನ್ ರೈಲ್ವೆ), ತಮಿಳುನಾಡಿನ ಎ.ಎಲ್.ಪಳನಿಯಪ್ಪನ್ (2) ವಿರುದ್ಧ ಪೂರ್ಣ ಪಾಯಿಂಟ್ ಪಡೆದರು. ಒಟ್ಟಾರೆ ಮೊದಲ ಆರು ಬೋರ್ಡ್‌ಗಳಲ್ಲಿ ಬಿಳಿ ಕಾಯಿಗಳಲ್ಲಿ ಆಡಿದವರೇ ಯಶಸ್ಸು ಕಂಡರು.ಮಂಗಳೂರಿನ ಗಹನ್ ಎಂ.ಜಿ., ಮೈಸೂರಿನ ವೈ.ಜಿ.ವಿಜೇಂದ್ರ, ಕೇರಳದ ಒ.ಟಿ.ಅನಿಲ್‌ಕುಮಾರ್, ಚೆನ್ನೈನ ಆರ್.ಎ.ಪ್ರದೀಪ್ ಕುಮಾರ್ ಕೂಡ ಮುನ್ನಡೆ ಸಾಧಿಸಿದರು. ಕಪ್ಪು ಕಾಯಿಗಳಲ್ಲಿ ಆಡಿದ ಗಹನ್ ಮೂರನೇ ಸುತ್ತಿನಲ್ಲಿ ಕೇರಳದ ವಿ.ಪಿ.ರಾಜೀವನ್ (2) ವಿರುದ್ಧ, ವಿಜೇಂದ್ರ, ತಮಿಳುನಾಡಿನ ಆರ್.ಮುರಳೀಧರನ್ (2) ವಿರುದ್ಧ ಜಯ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.