ಚೆಸ್: ಮತ್ತೆ ಡ್ರಾ ಪಂದ್ಯದಲ್ಲಿ ಆನಂದ್

7

ಚೆಸ್: ಮತ್ತೆ ಡ್ರಾ ಪಂದ್ಯದಲ್ಲಿ ಆನಂದ್

Published:
Updated:

ಬಿಲ್ಬೊ, ಸ್ಪೇನ್ (ಪಿಟಿಐ): ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಐದನೇ ಮಾಸ್ಟರ್ಸ್ ಫೈನಲ್ ಚೆಸ್ ಟೂರ್ನಿಯಲ್ಲಿ ಮತ್ತೆ ಡ್ರಾ ಸಾಧಿಸಿದ್ದಾರೆ.ಬುಧವಾರ ನಡೆದ ಪಂದ್ಯದಲ್ಲಿ ಅವರು ವಿಶ್ವದ ಎರಡನೇ ರ‌್ಯಾಂಕ್‌ನ ಆಟಗಾರ ಲೆವೋನ್ ಅರೋನಿಯನ್ ಎದುರು ಡ್ರಾ ಮಾಡಿಕೊಂಡರು. ಹಿಂದಿನ ಪಂದ್ಯದಲ್ಲಿ ಸ್ಪೇನ್‌ನ ಫ್ರಾನ್ಸಿಸ್ಕೊ ವಾಲೆಜಾ ಪೊನ್ಸ್ ಎದುರು ಪಾಯಿಂಟ್ ಹಂಚಿಕೊಂಡಿದ್ದ ವಿಶ್ವ ಚಾಂಪಿಯನ್ ಆನಂದ್‌ಗೆ ಇದು ಸತತ ಏಳನೇ ಡ್ರಾ.  ಭಾರತ ಈ ಆಟಗಾರ ಒಟ್ಟು ಏಳು ಪಾಯಿಂಟ್ ಹೊಂದಿದ್ದಾರೆ.ವಾಲೆಜಾ ಪೊನ್ಸ್ ಅವರನ್ನು ಮಣಿಸಿದ ನಾರ್ವೆಯ ಮೆಗ್ನಸ್     ಕಾರ್ಲ್‌ಸನ್ ಜಂಟಿ ಅಗ್ರಸ್ಥಾನಕ್ಕೇರಿದರು. ಇಟಲಿಯ ಫ್ಯಾಬಿಯಾನೊ ಕರುವಾನಾ ಕೂಡ 12 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.ಈ ಟೂರ್ನಿಯ ಪ್ರತಿ ಗೆಲುವಿಗೆ ಮೂರು ಪಾಯಿಂಟ್ ಹಾಗೂ ಡ್ರಾಗೆ 1 ಪಾಯಿಂಟ್ ಲಭಿಸುತ್ತದೆ.

ಏಳನೇ ಸುತ್ತಿನ ಅಂತ್ಯಕ್ಕೆ ಫಲಿತಾಂಶ: ಫ್ಯಾಬಿಯಾನೊ ಕರುವಾನಾ (ಇಟಲಿ; 12 ಪಾಯಿಂಟ್ಸ್), ಮೆಗ್ನಸ್ ಕಾರ್ಲ್‌ಸನ್ (ನಾರ್ವೆ; 12 ಪಾಯಿಂಟ್ಸ್), ಲೆವೋನ್ ಅರೋನಿಯನ್ (ಅರ್ಮೇನಿಯಾ; 9), ವಿಶ್ವನಾಥನ್ ಆನಂದ್ (ಭಾರತ; 7), ಸರ್ಜಿ ಕರ್ಜಾಕಿನ್ (ರಷ್ಯಾ; 5)  ಹಾಗೂ ಫ್ರಾನ್ಸಿಸ್ಕೊ ವಾಲೆಜಾ ಪೊನ್ಸ್     (ಫ್ರಾನ್ಸ್; 4).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry