ಚೆಸ್: ಮತ್ತೆ ಡ್ರಾ ಪಂದ್ಯದಲ್ಲಿ ನೇಗಿ
ಲೀಡನ್, ಹಾಲೆಂಡ್ (ಪಿಟಿಐ): ಏಷ್ಯನ್ ಚಾಂಪಿಯನ್ ಭಾರತದ ಪರಿಮಾರ್ಜನ ನೇಗಿ ಇಲ್ಲಿ ನಡೆಯುತ್ತಿರುವ ಲೀಡನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮತ್ತೆ ಡ್ರಾಗೆ ಸಮಾಧಾನಪಡಬೇಕಾಯಿತು.
ಗ್ರ್ಯಾಂಡ್ಮಾಸ್ಟರ್ ನೇಗಿ ಅಂತರರಾಷ್ಟ್ರೀಯ ಮಾಸ್ಟರ್ ಹಾಲೆಂಡ್ನ ಜಾನ್ ವಿಲೆಮ್ ಡಿ ಜಾಂಗ್ ಎದುರು ಡ್ರಾ ಸಾಧಿಸುವ ಮೂಲಕ ಪಾಯಿಂಟ್ ಹಂಚಿಕೊಂಡರು. ಭಾರತದ ಆಟಗಾರನ ಬಳಿ ಈಗ ಒಟ್ಟು 3 ಪಾಯಿಂಟ್ಗಳಿವೆ. ಅವರು ಎರಡು ಡ್ರಾ ಹಾಗೂ ಎರಡು ಗೆಲುವು ಸಾಧಿಸಿದ್ದಾರೆ.
ಆದರೆ ದಿನದ ಅಚ್ಚರಿ ಫಲಿತಾಂಶವೆಂದರೆ ಎಸ್.ಅರುಣ್ ಪ್ರಸಾದ್ ಗೆಲುವು ಸಾಧಿಸಿದ್ದು. ಅವರು ಹಾಲೆಂಡ್ನ ಮಿಗೊಯೆಲ್ ಅಡ್ಮಿರಾಲ್ಗೆ ಆಘಾತ ನೀಡಿದರು. ಅವರೀಗ ಒಟ್ಟು 3.5 ಪಾಯಿಂಟ್ಗಳೊಂದಿಗೆ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ನಂತರದ ಸ್ಥಾನದಲ್ಲಿ ನೇಗಿ ಇದ್ದಾರೆ. ಇನ್ನೂ ಐದು ಸುತ್ತಿನ ಪಂದ್ಯ ಬಾಕಿ ಉಳಿದಿವೆ.
ಗ್ರ್ಯಾಂಡ್ಮಾಸ್ಟರ್ ಎಸ್.ಕಿದಂಬಿ (3 ಪಾಯಿಂಟ್ಸ್) ಹಾಲೆಂಡ್ನ ಜೆಫ್ ರಿನಿನಾರ್ಟ್ಸ್ ಎದುರು ಡ್ರಾ ಮಾಡಿಕೊಂಡರು. ಮತ್ತೊಬ್ಬ ಗ್ರ್ಯಾಂಡ್ಮಾಸ್ಟರ್ ಎಂ.ಆರ್.ಲಲಿತ್ ಬಾಬು (3 ಪಾಯಿಂಟ್ಸ್) ಹಾಲೆಂಡ್ನ ಅಲೆಗ್ಸಾಂಡರ್ ವಾನ್ ಬೀಕ್ ಅವರನ್ನು ಮಣಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.