ಚೆಸ್: ಮತ್ತೆ ಡ್ರಾ ಸಾಧಿಸಿದ ಆನಂದ್

6

ಚೆಸ್: ಮತ್ತೆ ಡ್ರಾ ಸಾಧಿಸಿದ ಆನಂದ್

Published:
Updated:

ಲಂಡನ್ (ಪಿಟಿಐ): ವಿಶ್ವನಾಥನ್ ಆನಂದ್‌ಗೆ ಇಲ್ಲಿ ನಡೆಯುತ್ತಿರುವ ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯಲ್ಲಿ ಗೆಲುವು ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಬುಧವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಜೊತೆ ಡ್ರಾ ಸಾಧಿಸಿದರು.ಸತತ ಮೂರು ಡ್ರಾಗಳಿಂದ ಮೂರು ಪಾಯಿಂಟ್ ಕಲೆಹಾಕಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆನಂದ್ ಕಳೆದ 17 ಪಂದ್ಯಗಳಲ್ಲಿ ಗೆಲುವು ಪಡೆದೇ ಇಲ್ಲ. ಇತ್ತೀಚೆಗೆ ನಡೆದ ಫೈನಲ್ ಮಾಸ್ಟರ್ಸ್ ಟೂರ್ನಿಯಲ್ಲೂ ಅವರು ಯಾವುದೇ ಜಯ ಪಡೆದಿರಲಿಲ್ಲ.ಅತ್ಯುತ್ತಮ ಫಾರ್ಮ್ ಮುಂದುವರಿಸಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರಸ್ಥಾನದಲ್ಲಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಗವೈನ್ ಜೋನ್ಸ್ ವಿರುದ್ಧ ಜಯ ಪಡೆದರು.

ಕಾರ್ಲ್‌ಸನ್ ಬಳಿ 10 ಪಾಯಿಂಟ್‌ಗಳಿವೆ.ಎಂಟು ಪಾಯಿಂಟ್‌ಗಳನ್ನು ಹೊಂದಿರುವ ಕ್ರಾಮ್ನಿಕ್ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಮೈಕಲ್ ಆ್ಯಡಮ್ಸ ಏಳು ಪಾಯಿಂಟ್‌ಗಳೊಂದಿಗೆ ಬಳಿಕದ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry