ಭಾನುವಾರ, ಜುಲೈ 25, 2021
22 °C

ಚೆಸ್: ರಘುನಂದನ್, ಶರಣ್ಯಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬೆಂಗಳೂರಿನ ಕೆ.ಎಸ್.ರಘುನಂದನ್ ಮತ್ತು ವಿ.ಶರಣ್ಯಾ, ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿಯಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ 11 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಉಡುಪಿ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಹಟ್ಟಿಯಂಗಡಿ ಶ್ರೀಸಿದ್ದಿನಾಯಕ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ನಡೆದ ಈ ಮೂರು ದಿನಗಳ ಕೂಟದ ಏಳು ಸುತ್ತುಗಳ ನಂತರ ರಘುನಂದನ್ ಮತ್ತು ಮಂಗಳೂರಿನ ಶರಣ್ ರಾವ್, ತಲಾ ಆರೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದು ಪ್ರಶಸ್ತಿ ಪೈಪೋಟಿಯಲ್ಲಿದ್ದರು. ಆದರೆ ಉತ್ತಮ ಪ್ರೊಗ್ರೆಸಿವ್ ಸ್ಕೋರ್ ಆಧಾರದಲ್ಲಿ ಅರ್ಧ ಪಾಯಿಂಟ್ಸ್ ಮುಂದಿದ್ದ  ರಘುನಂದನ್‌ಗೆ ಪ್ರಶಸ್ತಿ ಒಲಿಯಿತು.

ಶರಣ್ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ತಲಾ ಐದು ಪಾಯಿಂಟ್ಸ್ ಸಂಗ್ರಹಿಸಿದ ಮಂಗಳೂರಿನ ನಿಖಿಲೇಶ್ ಎಂ.ಹೊಳ್ಳ, ತುಮಕೂರಿನ ಪಿ.ಪ್ರಜ್ವಲ್ ಶೇಠ್ ಮತ್ತು ಪಿ.ಶಕ್ತಿ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ವಿ.ಶರಣ್ಯಾ 5 ಸುತ್ತುಳಿಂದ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಪಡೆದರು.

ಸ್ವಾತಿ ಭಟ್, ವಿಯಾಲಾ ಲೂಯಿಸ್ ಮತ್ತು ಅನನ್ಯಾ (ತಲಾ 4), ತುಳಸಿ ಎಂ. (3.5) ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಪಡೆದ ರಘುನಂದನ್ ಮತ್ತು ಶರಣ್; ಬಾಲಕಿಯರ ವಿಭಾಗದಲ್ಲಿ  ಈ ಸಾಧನೆ ಮಾಡಿದ ಶರಣ್ಯಾ ಮತ್ತು ಸ್ವಾತಿ ಭಟ್, ಅಹಮದಾಬಾದ್‌ನಲ್ಲಿ ಇದೇ ತಿಂಗಳ 26ರಿಂದ ಜೂನ್ 4 ರವರೆಗೆ ನಡೆಯಲಿರುವ 11 ವರ್ಷದೊಳಗಿನ ರ್ಟ್ರೋಯ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡರು.

ವಯೋವರ್ಗ ಪ್ರಶಸ್ತಿ: ಭದ್ರಾವತಿಯ ಖುಷಿ ಎಂ.ಹೊಂಬಾಳ್ ಏಳು ವರ್ಷದೊಳಗಿನವರ ವಿಭಾಗದಲ್ಲಿ; ನಾಗಶ್ರೀ ಅರಗ ಒಂಬತ್ತು  ವರ್ಷದೊಳಗಿನವರ ವಿಭಾಗದಲ್ಲಿ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರೆ; ಕುಂದಾಪುರದ ಪ್ರಭವ್ ಶೆಟ್ಟಿ ಏಳು ವರ್ಷದೊಳಗಿನವರ ವಿಭಾಗದಲ್ಲಿ ಮತ್ತು ಹುಬ್ಬಳ್ಳಿಯ ಆದಿತ್ಯ ಬಿ.ಕುಲಕರ್ಣಿ ಒಂಬತ್ತು ವರ್ಷದೊಳಗಿನವರ ವಿಭಾಗದಲ್ಲಿ ಉತ್ತಮ ಆಟಗಾರರೆನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.