ಚೆಸ್: ವಿಶ್ವನಾಥನ್ ಆನಂದ್‌ಗೆ ಐದನೇ ಸ್ಥಾನ

7

ಚೆಸ್: ವಿಶ್ವನಾಥನ್ ಆನಂದ್‌ಗೆ ಐದನೇ ಸ್ಥಾನ

Published:
Updated:

ಬಿಲ್ಬಾವೊ, ಸ್ಪೇನ್ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ನಾಲ್ಕನೇ ಹಾಗೂ ಅಂತಿಮ ಮಾಸ್ಟರ್ಸ್ 22 ವಿಭಾಗದ ಸೂಪರ್ ಚೆಸ್ ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದುಕೊಂಡರು.ಒಂಬತ್ತನೇ ಸುತ್ತಿನ ಪಂದ್ಯಗಳ ನಂತರ ಕೊನೆಯ ಸ್ಥಾನದಲ್ಲಿದ್ದ ಭಾರತದ ಚೆಸ್ ತಾರೆಯು ಕೊನೆಯ ಸುತ್ತಿನಲ್ಲಿ ಗೆಲ್ಲುವ ಮೂಲಕ ಐದನೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾದರು. ಬುಧವಾರ ನಡೆದ ಹತ್ತನೇ ಸುತ್ತಿನ ಪಂದ್ಯದಲ್ಲಿ ಅವರು ಉಕ್ರೇನ್‌ನ ವಲ್ಲೆಜೊ ಪಾನ್ಸ್ ವಿರುದ್ಧ ಗೆದ್ದರು.ಆರು ಆಟಗಾರರ ಡಬಲ್ ರೌಂಡ್‌ರಾಬಿನ್ ಮಾದರಿಯ ಈ ಟೂರ್ನಿಯಲ್ಲಿ ಆನಂದ್ ಅಗ್ರಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ನಿರಾಸೆಯ ಹಾದಿಯಲ್ಲಿ ಸಾಗಿದ್ದರಿಂದ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಅವರು ಕೊನೆಯಲ್ಲಿ ಗೆದ್ದು ಚೇತರಿಸಿಕೊಂಡರು ಎನ್ನುವುದೇ ಸಮಾಧಾನ. ನಾರ್ವೆಯ ಮ್ಯಾಗ್ನೂಸ್ ಕಾರ್ಲ್‌ಸನ್ ಅವರು ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry