ಚೆಸ್: ವಿಶ್ವನಾಥನ್ ಆನಂದ್‌ಗೆ ಐದನೇ ಸ್ಥಾನ

7

ಚೆಸ್: ವಿಶ್ವನಾಥನ್ ಆನಂದ್‌ಗೆ ಐದನೇ ಸ್ಥಾನ

Published:
Updated:

ಬಿಲ್ಬೊ, ಸ್ಪೇನ್ (ಪಿಟಿಐ): ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಭಾನುವಾರ ಇಲ್ಲಿ ಕೊನೆಗೊಂಡ ಐದನೇ ಮಾಸ್ಟರ್ಸ್ ಫೈನಲ್ ಚೆಸ್ ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಒಂಬತ್ತು ಡ್ರಾ ಹಾಗೂ ಒಂದು ಸೋಲು ಕಂಡ ಆನಂದ್ ಒಟ್ಟು 9 ಪಾಯಿಂಟ್ ಪಡೆದರು.ಹತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದ್ಲ್ಲಲಿ ರಷ್ಯಾದ ಸರ್ಜಿ ಕರ್ಜಾಕಿನ್ ಜೊತೆ ಪಾಯಿಂಟ್ ಹಂಚಿಕೊಂಡರು. ವಿಶ್ವದ ಅಗ್ರ ರ‌್ಯಾಂಕ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಈ ಟೂರ್ನಿಯ ಚಾಂಪಿಯನ್ ಆದರು. ಅವರು ಒಟ್ಟು 17 ಪಾಯಿಂಟ್ ಗಳಿಸಿದರು. ಫ್ಯಾಬಿಯಾನೊ ಕರುವಾನಾ ಕೂಡ ಇಷ್ಟೇ ಪಾಯಿಂಟ್ ಗಳಿಸಿದ್ದರು. ಆದರೆ ವಿಜೇತರನ್ನು ನಿರ್ಣಯಿಸಲು ಪ್ಲೇ ಆಫ್ ಮೊರೆ ಹೋಗಲಾಯಿತು. ಇದರಲ್ಲಿ ಕಾರ್ಲ್‌ಸನ್ 2-0ರಲ್ಲಿ ಕರುವಾನಾ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry